ಪುಟ್ಟರಾಜು ಮಂಡ್ಯಕ್ಕೆ ಅಭ್ಯರ್ಥಿ ಅಂತ ಫಿಕ್ಸ್ ಆಗಿತ್ತು, ಕೊನೆ ಘಳಿಗೆಯಲ್ಲಿ ಕುಮಾರಸ್ವಾಮಿ ಮದುವೆ ಗಂಡಾದರು: ಬಾಲಕೃಷ್ಣ
ಚನ್ನಪಟ್ಟಣವನ್ನು ಇನ್ನೂ ಮೂರೂವರೆ ವರ್ಷ ಜೆಡಿಎಸ್ ಪ್ರತಿನಿಧಿಸಲಿ ಅಂತ ವಿರೋಧ ಪಕ್ಷದವರು ಹೇಳಿದಂತೆ ಕೇಳಲು ಇದೇನು ತಮಾಷೆನಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆ, ಯಾರನ್ನು ಆರಿಸಬೇಕೆಂದು ಜನ ತೀರ್ಮಾನ ಮಾಡುತ್ತಾರೆ ಎಂದು ಬಾಲಕೃಷ್ಣ ಹೇಳಿದರು.
ರಾಮನಗರ: ಸಿಪಿ ಯೋಗೇಶ್ವರ್ ಪರ ಪ್ರಚಾರ ಮಾಡುತ್ತಾ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹೆಚ್ ಡಿ ಕುಮಾರಸ್ವಾಮಿಯವರನ್ನು ದೆಹಲಿಗೆ ಕರೆದೊಯ್ದು ಮಂತ್ರಿ ಮಾಡುವ ಉದ್ದೇಶವೇನೂ ಇರಲಿಲ್ಲ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ ಸಿಎನ್ ಮಂಜುನಾಥ ಗೆದ್ದರೆ ತನ್ನ ಪ್ರಭಾವ ಕಡಿಮೆಯಾದೀತು ಎಂಬ ಆತಂಕದಲ್ಲಿದ್ದ ಕುಮಾರಸ್ವಾಮಿ ಅದಾಗಲೇ ಅಭ್ಯರ್ಥಿಯೆಂದು ಖಚಿತವಾಗಿದ್ದ ಸಿಎಸ್ ಪುಟ್ಟರಾಜು ಅವರನ್ನು ಹಿಂದೆ ಸರಿಸಿ ತಾವೇ ಸ್ಪರ್ಧೆಗಿಳಿದರು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೇರೆ ಸಿಎಂಗಳ ತರ ಸಿದ್ದರಾಮಯ್ಯ ಆಸ್ತಿ ಮಾಡಲು ಮುಂದಾಗಿದ್ರೆ ಅರ್ಧ ಬೆಂಗಳೂರು ಅವರದ್ದೇ ಇರ್ತಿತ್ತು: ಶಾಸಕ ಬಾಲಕೃಷ್ಣ
Published on: Nov 07, 2024 02:05 PM