ರವಿ ಬಂಧನದ ಬೆಳವಣಿಗೆಗಳು ಶಿವಕುಮಾರ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಚಿತಾವಣೆ ಮೇರೆಗೆ ನಡೆದಿವೆ: ಅಶೋಕ
ವಿಷಯ ತಿಳಿಯುತ್ತಿದ್ದಂತೆಯೇ ವಿಜಯೇಂದ್ರ ಬೆಂಗಳೂರಿಂದ ಇಲ್ಲಿಗೆ ಧಾವಿಸಿದ್ದಾರೆ, ಬೆಳಗಿನ ಜಾವ ಮೂರು ಗಂಟೆಯವರೆಗೆ ತಾನು ಇದೇ ಸಂಬಂಧ ಓಡಾಡುತ್ತಿದ್ದೆ, ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಗೃಹ ಸಚಿವನಾಗಿರುವ ತನಗೆ ಪೊಲೀಸರು ಠಾಣೆಯೊಳಗೆ ಬರಲು ಬಿಟ್ಟಿಲ್ಲ, ರವಿ ಅವರನ್ನು ಬಿಡಿಸಲಲ್ಲ, ಅದರೆ ದೂರು ದಾಖಲಿಸಲು ತಾನು ಸ್ಟೇಶನ್ಗೆ ಹೋಗಿದ್ದು ಎಂದು ಅಶೋಕ ಹೇಳಿದರು.
ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಸಿಟಿ ರವಿಯವರನ್ನು ಬಂಧಿಸುವಲ್ಲಿ ಹಲವು ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ವಿಪಕ್ಷ ನಾಯಕ ಅರ್ ಅಶೋಕ ಹೇಳಿದರು. ಅವರಿಗೆ ನೋಟೀಸ್ ನೀಡದೆ ಬಂಧಿಸಲಾಗಿದೆ, ಬಂಧಿಸುವ ಮೊದಲು ಸಭಾಪತಿಗಳಿಗೆ ದೂರು ಸಲ್ಲಿಸಲಾಗಿಲ್ಲ, ಪೊಲೀಸರು ಮೇಲಿಂದ ಬರೋ ಆದೇಶಗಳನ್ನು ಪಾಲಿಸುತ್ತಾ ಬಂದಿದ್ದಾರೆ, ಡಿಕೆ ಶಿವಕುಮಾರ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಚಿತಾವಣೆ ಮೇರೆಗೆ ಇದೆಲ್ಲ ನಡೆಯುತ್ತಿದೆ, ಸುವರ್ಣ ಸೌಧದ ಅವರಣದಲ್ಲೇ ಅವರಿಬ್ಬರು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನ್ಯಾಯಾಲಯದಲ್ಲಿ ರವಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:ರವಿಯನ್ನು ಕಾಡಿನಲ್ಲಿ ಸುತ್ತಿಸುವಾಗ ಪಿಎಫ್ಐನವರು ದಾಳಿ ಮಾಡಿದ್ದರೆ ಅದಕ್ಕೆ ಹೊಣೆ ಯಾರಾಗುತ್ತಿದ್ದರು? ಅರ್ ಅಶೋಕ