ತಮ್ಮ ಪ್ರತಿನಿಧಿಯ ಬಗ್ಗೆ ಕೆಟ್ಟದಾಗಿ ಮಾತಾಡಿದಾಗ ಜನ ಸುಮ್ಮನಿರಲ್ಲ, ರವಿಯನ್ನು ಬಿಟ್ಟಿದ್ದೇ ಹೆಚ್ಚು: ಡಿಕೆ ಶಿವಕುಮಾರ್
ಬಂಧನವಾದಾಗ ಕುಟುಂಬದ ಒಂದಿಬ್ಬರನ್ನು ಠಾಣೆಯೊಳಗೆ ಮಾತಾಡಿಸಲು ಬಿಡುತ್ತಾರೆ, ಆದರೆ ಬಿಜೆಪಿ ನಾಯಕರು ಒಳಗಡೆ ಕೂತು ಮೀಟಿಂಗ್ ಮಾಡುತ್ತ್ತಿರೋದನ್ನು ಟಿವಿ ಮಾಧ್ಯಮಗಳಲ್ಲಿ ತಾನು ನೋಡಿದ್ದಾಗಿ ಶಿವಕುಮಾರ್ ಹೇಳಿದರು. ರವಿಯವರ ಬಂಧನಕ್ಕೆ ಕಾರಣಗಳು ಮಾಧ್ಯಮದವರ ಬಳಿ, ಅದಕ್ಕಿಂತ ಹೆಚ್ಚು ತಾನೇನೂ ಹೇಳಬೇಕಾಗಿಲ್ಲ ಎನ್ನುತ್ತಾ ಶಿವಕುಮಾರ್ ಅಲ್ಲಿಂದ ಹೊರಟರು.
ಬೆಳಗಾವಿ: ಸಿಟಿ ರವಿಯವರ ಬಂಧನ ಪ್ರಕರಣದಲ್ಲಿ ತಮ್ಮ ಸರ್ಕಾರ ಮಧ್ಯಪ್ರವೇಶ ಮಾಡುತ್ತಿಲ್ಲ, ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಇಲ್ಲಿಯವರೇ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಾತಾಡಿ ಉಳಿದಿದ್ದೇ ರವಿಯವರ ಪುಣ್ಯ, ತಮ್ಮ ಪ್ರತಿನಿಧಿಯ ಬಗ್ಗೆ ಕೀಳಾಗಿ ಮಾತಾಡಿದರೆ ಜನ ಹೇಗೆ ಸಹಿಸಿಕೊಳ್ಳುತ್ತಾರೆ? ರವಿಯ ಕೊಳಕು ಬಾಯಿ ಹೊಸದೇನಲ್ಲ, ಹಿಂದೆ ಅವರು ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಅಂತ ಹೇಳಿದ್ದೂ ಇದೆ, ಚಿಕ್ಕಮಗಳೂರು ಜನರೆಲ್ಲ ಸಂಸ್ಕಾರವಂತರು, ಇದೊಂದೇ ಹರಕು ಬಾಯಿ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಬೋರ್ವೆಲ್ ಕೊರೆಸಿದ ಅತ್ತೆ-ಸೊಸೆಗೆ ಡಿಕೆ ಶಿವಕುಮಾರ್ ಶ್ಲಾಘನೆ