ಸಿಟಿ ರವಿ ಡಬಲ್ ಎಂಜಿನ್ ಯಾಕೆ ಟ್ರಿಪಲ್ ಎಂಜಿನ್ ಸರ್ಕಾರವನ್ನೂ ಮಾಡಿಕೊಳ್ಳಲಿ, ನಮ್ಮದೇನೂ ಅಭ್ಯಂತರವಿಲ್ಲ: ಕೆಎಂ ಶಿವಲಿಂಗೇಗೌಡ, ಶಾಸಕರು
ಅವರು ಡಬಲ್ ಮಾತ್ರ ಯಾಕೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಗಳನ್ನು ಸೇರಿಸಿಕೊಂಡು ಟ್ರಿಪಲ್ ಎಂಜಿನ್ ಸರ್ಕಾರವನ್ನು ಬೇಕಾದರೂ ಮಾಡಿಕೊಳ್ಳಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದರು ಶಿವಲಿಂಗೇಗೌಡರು.
ಬೆಂಗಳೂರು: ಜೆಡಿಎಸ್ ಪಕ್ಷದ ಧೋರಣೆಗಳಿಂದ ಬೇಸತ್ತು ಪಕ್ಷ ತ್ಯಜಿಸುತ್ತಿರುವುದಾಗಿ ಹೇಳಿರುವ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡರು (KM Shivalingegowda) ಅತ್ಯುತ್ತಮ ಸಂಸದಿಯ ಪಟು ಅನ್ನೋದರಲ್ಲಿ ಅನುಮಾನವಿಲ್ಲ. ಸದನದಲ್ಲಿ ಅವರು ಮಾತಾಡಲು ನಿಂತರೆ ಪ್ರತಿಯೊಬ್ಬ ಸದಸ್ಯ ತಲೆದೂಗುತ್ತಾರೆ. ವಿಷಯಗಳನ್ನು ಗೌಡರು ಚೆನ್ನಾಗಿ ಅರ್ಥಮಾಡಿಕೊಂಡಿರುವುದರಿಂದ ಅಧಿಕಾರಯುತವಾಗಿ ಮಾತಾಡಬಲ್ಲರು. ಸದನದಲ್ಲಿ ಇಂದು ಅವರು ದಾಖಲೆ ಮತ್ತು ಅಂಕಿ-ಅಂಶಗಳ (stats) ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು. ಮಾತಾಡುತ್ತಲೇ ಅವರು ಬಿಜೆಪಿ ಶಾಸಕ ಸಿಟಿ ರವಿ (CT Ravi) ಅವರ ಕಾಲೆಳೆದರು. ರವಿ ಯಾವಾಗಲೂ ತಮ್ಮದು ಡಬಲ್ ಎಂಜಿನ್ ಸರ್ಕಾರ ಅನ್ನುತ್ತಾರೆ, ಅವರು ಡಬಲ್ ಮಾತ್ರ ಯಾಕೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಗಳನ್ನು ಸೇರಿಸಿಕೊಂಡು ಟ್ರಿಪಲ್ ಎಂಜಿನ್ ಸರ್ಕಾರವನ್ನು ಬೇಕಾದರೂ ಮಾಡಿಕೊಳ್ಳಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದರು. ದುರುದೃಷ್ಟವಶಾತ್ ಅವರು ಮಾತಾಡುವಾಗ ಸದನದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸದಸ್ಯರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ