ಸಿಟಿ ರವಿಯವರಿಗೆ ಜಾಮೀನು ಸಿಗುವ ಸಾಧ್ಯತೆ ಇದೆ ಎಂದ ವಕೀಲ ಶ್ರೀನಿವಾಸ ರಾವ್
ವಿಧಾನ ಪರಿಷತ್ನ ಗೌರವಾನ್ವಿತ ಸದಸ್ಯರಾಗಿರುವ ರವಿಯವರನ್ನು ಪೊಲೀಸರು ಅತ್ಯಂತ ಕೆಟ್ಟದ್ದಾಗಿ ನಡೆಸಿಕೊಂಡಿದ್ದಾರೆ, ಪರಿಷತ್ ಕಸ್ಟೋಡಿಯನ್ ಆಗಿರುವ ಸಭಾಪತಿಯವರನ್ನು ವಿಶ್ವಾಸಕ್ಕೆ ಅವರನ್ನು ವಶಕ್ಕೆ ಪಡೆಯಲಾಗಿದೆ, ಅವರಿಗೆ ಊಟ ನೀರು ಕೊಡದ ಕಾರಣ ದೈಹಿಕ ಮತ್ತು ಮಾನಸಿಕವಾಗಿ ಬಳಲಿದ್ದಾರೆ, ಅವರನ್ನು ರಾತ್ರಿಯಿಡೀ ಬೇರೆ ಬೇರೆ ಊರುಗಳಿಗೆ ಸುತ್ತಿಸಲಾಗಿದೆ ಎಂದು ವಕೀಲ ಶ್ರೀನಿವಾಸ ರಾವ್ ಹೇಳಿದರು.
ಬೆಳಗಾವಿ: ಪೊಲೀಸರಿಂದ ಬಂಧನಕ್ಕೊಳಗಾಗಿರುವ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಇದೆಯೆಂದು ಅವರ ವಕೀಲ ಶ್ರೀನಿವಾಸ ರಾವ್ ಹೇಳಿದರು. ಜಾಮೀನು ಕೋರಿ ವಾದ ಮಂಡಿಸಿದ ಬಳಿಕ ಕೋರ್ಟ್ ಹೊರಗಡೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಜೆಎಂಎಫ್ಸಿ ಗೆ ಜಾಮೀನು ನೀಡುವ ಅಧಿಕಾರವಿಲ್ಲ ಎಂಬ ವಿಷಯ ಪ್ರಸ್ತಾಪವಾದಾಗ ವ್ಯಕ್ತಿಯೊಬ್ಬನ ಸ್ವಾತಂತ್ರ್ಯವು ಅತ್ಯಂತ ಪ್ರಾಮುಖ್ಯವಾದದ್ದು ಎಂದು ಮಾನ್ಯ ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಈ ಕೋರ್ಟ್ ಅದನ್ನು ಪರಿಗಣಿಸಿ ಜಾಮೀನು ನೀಡಬಹುದೆಂಬ ಸಂಗತಿಯನ್ನು ಜೆಎಂಎಫ್ಸಿಗೆ ಮನವರಿಕೆ ಮಾಡಿಸಲಾಗಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಟಿ ರವಿ ಬಂಧನ: ಉಪಸಭಾಪತಿ ಗರಂ, ಹಕ್ಕುಚ್ಯುತಿ ಮಂಡನೆ ಎಚ್ಚರಿಕೆ