ಗದುಗಿನ ಬಡ್ಡಿ ಯಲ್ಲಪ್ಪಗೆ ಸೇರಿದ ಮನೆಗಳಲ್ಲಿ ಲಾಕರ್​ಗಳು ಒಡೆದಂತೆಲ್ಲ ಕೋಟಿಗಟ್ಟಲೆ ಹಣ ಮತ್ತು ಚಿನ್ನಾಭರಣ!

Updated on: Feb 12, 2025 | 5:58 PM

ಬಡ್ಡಿ ಯಲ್ಲಪ್ಪನ ಮನೆಗಳಿಂದ ಪೊಲೀಸರು ಇದುವರೆಗೆ ₹ 2ಕೋಟಿಗೂ ಹೆಚ್ಚು ಹಣ ಬರಾಮತ್ತು ಮಾಡಿಕೊಂಡಿದ್ದಾರೆ. ಅಶೋಕ ಗಣಾಚಾರಿಯಂಥ ತನ್ನ ಸಾಲಗಾರರಿಗೆ ಯಲ್ಲಪ್ಪ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಅದರೆ ಮರ್ಯಾದೆಗೆ ಹೆದರಿ ಯಾರೂ ದೂರು ಸಲ್ಲಿಸಿರಲಿಲ್ಲ. ಅವನ ಬಳಿ ಇನ್ನೂ ಹಲವಾರು ಲಾಕರ್​ಗಳಿವೆಯಂತೆ. ಅಂದರೆ ಇನ್ನೂ ಕೋಟಿಗಟ್ಟಲೆ ಹಣ ಮತ್ತು ಬಂಗಾರದ ಒಡವೆಗಳು ಪತ್ತೆಯಾಗಲಿವೆ.

ಗದಗ: ನಗರದ ಬಡ್ಡಿ ಯಲ್ಲಪ್ಪ ಹೆಸರಿನ ಮನುಷ್ಯ ಜನರಿಂದ ಅಂದರೆ ತನ್ನಿಂದ ಸಾಲಪಡೆದವರಿಂದ ಬಡ್ಡಿ ದುಡ್ಡನ್ನು ಪೀಕಿ ಪೀಕಿ ಎಷ್ಟು ಹಣ ಮಾಡಿದ್ದಾನೆ ಮತ್ತು ಬಚ್ಚಿಟ್ಟಿದ್ದಾನೆ ಅಂತ ಒಮ್ಮೆ ನೋಡಿ. ಅವನ ಅಸಲು ಹೆಸರು ಯಲ್ಲಪ್ಪ ಮಿಸ್ಕಿನ್ ಆದರೆ ಜನ ಬಡ್ಡಿ ಯಲ್ಲಪ್ಪ ಅಂತ್ಲೇ ಕರೆಯೋದು. ನಿನ್ನೆ ಪೊಲೀಸರು ದೂರೊಂದರ ಆಧಾರದ ಮೇಲೆ ಅವನ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಕೋಟಿಗಟ್ಟಲೆ ಹಣ ಪತ್ತೆಯಾಗಿದೆ. ಇವತ್ತು ಅವನಿಗೆ ಸೇರಿದ ಕೇಸರ್ ಫೈನಾನ್ಸ್ ಬಳಿಯಿರುವ ಮನೆಯ ಮೇಲೆ ದಾಳಿ ನಡೆಸಿದಾಗಲೂ ಕಂತೆ ಕಂತೆ ನೋಟುಗಳು ಮತ್ತು ಕಿಲೋಗಟ್ಟಲೆ ಚಿನ್ನಾಭರಣ ಪತ್ತೆಯಾಗಿವೆ. ಅಶೋಕ ಗಣಾಚಾರಿ ಎನ್ನುವವರು ಯಲ್ಲಪ್ಪನಿಂದ ಸಾಲ ಪಡೆದು ಅವನು ನೀಡುತ್ತಿದ್ದ ಕಿರುಕುಳ ತಾಳಲಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದಾಳಿನಡೆಸಿ ಶೋಧ ನಡೆಸಿದಾಗ ಸಿಕ್ಕೊರೋದು ಕೋಟಿ ಕೋಟಿ ಹಣ ಮತ್ತು ಅಪಾರ ಪ್ರಮಾಣದ ಚಿನ್ನಾಭರಣ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಹಾಯ ನೆಪದಲ್ಲಿ ಮೋಸ ಮಾಡಿ ಇಡೀ ಕುಟುಂಬವನ್ನೇ ಮನೆ ಬಿಟ್ಟು ಓಡಿಸಿದ್ದ ಪೊಲೀಸ್ ಪೇದೆ ಅರೆಸ್ಟ್

Published on: Feb 12, 2025 04:52 PM