ಸಹಾಯ ನೆಪದಲ್ಲಿ ಮೋಸ ಮಾಡಿ ಇಡೀ ಕುಟುಂಬವನ್ನೇ ಮನೆ ಬಿಟ್ಟು ಓಡಿಸಿದ್ದ ಪೊಲೀಸ್ ಪೇದೆ ಅರೆಸ್ಟ್
ತುಮಕೂರು ಜಿಲ್ಲೆಯ ಶಿರಾ ಕಾನ್ಸ್ಟೇಬಲ್ ಕುಮಾರ್ ಎಂಬುವನಿಂದ ಸತೀಶ್ಗೆ ವಂಚನೆ ಮಾಡಲಾಗಿದೆ. ವಾರದ ಹಿಂದೆ ಮನೆಯಿಂದ ಸತೀಶ್ ಕುಟುಂಬವನ್ನ ಹೊರಹಾಕಿದ್ದ. ಹೀಗಾಗಿ ಕುಮಾರ್ ದೌರ್ಜನ್ಯವನ್ನು ಸತೀಶ್ ಎಸ್ಪಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಕುಮಾರ್ನನ್ನ ಪೊಲೀಸರು ಬಂಧಿಸಿದ್ದು, ಸತೀಶ್ಗೆ ಮನೆಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ತುಮಕೂರು, ಆಗಸ್ಟ್ 26: ನ್ಯಾಯಕ್ಕಾಗಿ ಠಾಣೆಗೆ ಹೋಗಿದ್ದ ವ್ಯಕ್ತಿಗೆ ಸಹಾಯದ ನೆಪದಲ್ಲಿ ಪೊಲೀಸಪ್ಪನಿಂದ (police constable) ವಂಚನೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಅಲ್ಲಿಗೆ ನ್ಯಾಯ ಕೊಡಿಸಬೇಕಾಗಿದ್ದ ಪೊಲೀಸರಿಂದಲೇ ಅನ್ಯಾಯಕ್ಕೊಳಗಾದ ವ್ಯಕ್ತಿಯ ಕುಟುಂಬ ಪೊಲೀಸ್ ಕಾನ್ಸ್ಟೇಬಲ್ ಕಿರುಕುಳಕ್ಕೆ ಬೀದಿಗೆ ಬಂದಿದ್ದಾರೆ. ಸದ್ಯ ತುಮಕೂರು ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿರಾ ಕಾನ್ಸ್ಟೇಬಲ್ ಕುಮಾರ್ ನನ್ನು ಬಂಧಿಸಲಾಗಿದೆ.
ಜಿಲ್ಲೆಯ ಶಿರಾ ಕಾನ್ಸ್ಟೇಬಲ್ ಕುಮಾರ್ ಎಂಬುವನಿಂದ ಸತೀಶ್ಗೆ ವಂಚನೆ ಮಾಡಲಾಗಿದೆ. ಗುಡ್ಡೆನಹಳ್ಳಿ ಸತೀಶ್, ಮಂಡ್ಯ ಅಭಿಷೇಕ್ ನಡುವೆ 3 ಲಕ್ಷ ರೂಪಾಯಿ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಅಭಿಷೇಕ್ಗೆ ಸತೀಶ್ 3 ಲಕ್ಷ ರೂಪಾಯಿ ನೀಡಬೇಕಿದ್ದ. ಹೀಗಾಗಿ ಶಿರಾ ಠಾಣೆಗೆ ಸತೀಶ್ ವಿರುದ್ಧ ಅಭಿಷೇಕ್ ದೂರು ನೀಡಿದ್ದ. ಈ ವೇಳೆ ಇಬ್ಬರ ನಡುವೆ ಪಿಸಿ ಕುಮಾರ್ ರಾಜಿ ಪಂಚಾಯ್ತಿ ಮಾಡಿದ್ದ.
ಇದನ್ನೂ ಓದಿ: ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಲೆ ಮಾಡಿದ ಮಲತಂದೆ ಅರೆಸ್ಟ್
ಪಿಸಿ ಕುಮಾರ್ ಸತೀಶ್ನೊಂದಿಗೆ ಸ್ನೇಹ ಬೆಳಸಿಕೊಂಡಿದ್ದ. ಸತೀಶ್ಗೆ 3 ಲಕ್ಷ ರೂ ನೀಡಿ ಅಭಿಷೇಕ್ಗೆ ಹಣ ಕೊಡುವಂತೆ ಸಹಾಯ ಮಾಡಿದ್ದ. ಹಣದ ಶೂರಿಟಿಗೆ ಮನೆ ಅಗ್ರಿಮೆಂಟ್ ಬರೆಸಿಕೊಂಡಿದ್ದ. ಆದರೆ ಕುಮಾರ ಅಗ್ರಿಮೆಂಟ್ ಬದಲು ತನ್ನ ಹೆಸರಿಗೆ ಮನೆ ರಿಜಿಸ್ಟ್ರೈಷನ್ ಮಾಡಿಕೊಂಡಿದ್ದ. ಇತ್ತ ಅಗ್ರಿಮೆಂಟ್ ಅಂತ ತಿಳಿದು ರಿಜಿಸ್ಟ್ರೇಷನ್ ಪತ್ರಕ್ಕೆ ಸತೀಶ್ ಸಹಿ ಹಾಕಿದ.
ಇದನ್ನೂ ಓದಿ: ಕ್ಯಾಬ್ ಚಾಲಕ ಆತ್ಮಹತ್ಯೆ: ಮಗನ ಶವದ ಮುಂದೆ ಕಣ್ಣೀರಿಡುತ್ತಾ ಕೊನೆಯುಸಿರೆಳೆದ ತಾಯಿ
ಬಳಿಕ ಸತೀಶ್ ಬಳಿ 80 ಸಾವಿರ ಬಡ್ಡಿ ವಸೂಲಿ ಮಾಡಿದ್ದ. ಬಡ್ಡಿ ಕೊಡದಿದ್ದಾಗ ಕುಮಾರ್ ಸತೀಶ್ ಕಾರನ್ನು ಕಿತ್ಕೊಂಡಿದ್ದ. ವಾರದ ಹಿಂದೆ ಮನೆಯಿಂದ ಸತೀಶ್ ಕುಟುಂಬವನ್ನ ಹೊರಹಾಕಿದ್ದ. ಹೀಗಾಗಿ ಕುಮಾರ್ ದೌರ್ಜನ್ಯವನ್ನು ಸತೀಶ್ ಎಸ್ಪಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಕುಮಾರ್ನನ್ನ ಪೊಲೀಸರು ಬಂಧಿಸಿದ್ದು, ಸತೀಶ್ಗೆ ಮನೆಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ಹೆಲ್ಮೆಟ್ ದಂಡ ಹೆಸರಿನಲ್ಲಿ ಕಾನೂನು ಬಾಹಿರ ಹಣ ಸ್ವೀಕಾರ: ಪಿಎಸ್ಐ ಸಸ್ಪೆಂಡ್
ಕಾರವಾರ: ದಂಡದ ಹೆಸರಿನಲ್ಲಿ ಚಿನ್ನದ ವ್ಯಾಪಾರಿ ಖಾತೆಗೆ ಹಣ ಹಾಕಿಸಿದ್ದ ಪಿಎಸ್ಐ ಸಸ್ಪೆಂಡ್ ಆಗಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಭಟ್ಕಳ ನಗರ ಠಾಣೆ ಪಿಎಸ್ಐ ಯಲ್ಲಪ್ಪ ಮಾದರ ಅವರನ್ನು ಎಸ್ಪಿ ಎಂ.ನಾರಾಯಣ ಅಮಾನತು ಮಾಡಿದ್ದಾರೆ. ಹಣ ಸಂದಾಯ ಆಗಿರುವ ಸ್ಕ್ರಿನ್ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.