ಪೆಂಗಲ್ ಸೈಕ್ಲೋನ್ ಎಫೆಕ್ಟ್​​: ಬದಲಾದ ಅರಬ್ಬೀ ಸಮುದ್ರ ಬಣ್ಣ

Edited By:

Updated on: Dec 03, 2024 | 2:26 PM

ಫೆಂಗಲ್ ಚಂಡಮಾರುತದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶಗಳು ತೀವ್ರವಾಗಿ ಪ್ರಭಾವಿತವಾಗಿವೆ. ಬಲವಾದ ಗಾಳಿ ಮತ್ತು ಅಲೆಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮಂಗಳೂರಿನ ಹಲವು ಕಡಲು ಪ್ರದೇಶಗಳಲ್ಲಿ ಸಮುದ್ರದ ಬಣ್ಣ ಕೇಸರಿಯಾಗಿ ಬದಲಾಗಿದೆ. ಸೋಮೇಶ್ವರ, ಉಳ್ಳಾಲ, ಕೋಟೆಕಾರು ಮುಂತಾದ ಪ್ರದೇಶಗಳು ಹೆಚ್ಚು ಪರಿಣಾಮಕ್ಕೆ ಒಳಗಾಗಿವೆ.

‘ಪೆಂಗಲ್’ ಸೈಕ್ಲೋನ್ ಹಿನ್ನೆಲೆಯಲ್ಲಿ ದಕ್ಷಿಣ ಜಿಲ್ಲೆಯಲ್ಲಿ ಭಾರಿ ವೇಗವಾಗಿ ಗಾಳಿ ಬೀಸುತ್ತಿದೆ. ಗಾಳಿಯಿಂದ ಕಡಲು ಪ್ರಕ್ಷುಬ್ಧಗೊಂಡಿದೆ. ಮಂಗಳೂರಿನ ಉಳ್ಳಾಲ, ಸೋಮೇಶ್ವರ, ಕೋಟೆಕಾರು, ಉಚ್ಚಿಲ, ಬಟ್ಟಂಪಾಡಿ ಕಡಲು ಪ್ರಕ್ಷುಬ್ಧಗೊಂಡಿದೆ. ಸೋಮವಾರದವರೆಗು ನೀಲಿ ಬಣ್ಣವಿದ್ದ ಸಮುದ್ರ ಇಂದು ಕೇಸರಿ ಬಣ್ಣಕ್ಕೆ ತಿರುಗಿದೆ. ಅಂದಾಜು 200 ಮೀಟರ್ ಆಳದವರೆಗೂ ಸಮುದ್ರ ಕೇಸರಿ ಬಣ್ಣಕ್ಕೆ ತಿರುಗಿದೆ.