ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು; ಯಕ್ಷಗಾನ ರದ್ದು

ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು; ಯಕ್ಷಗಾನ ರದ್ದು

ಪ್ರಜ್ವಲ್ ಅಮೀನ್​, ಉಡುಪಿ
| Updated By: ಸುಷ್ಮಾ ಚಕ್ರೆ

Updated on: Dec 03, 2024 | 4:11 PM

ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೆ ಮಳೆ ನೀರು ನುಗ್ಗಿದೆ. ವೇಷಧಾರಿಗಳು ಬಣ್ಣ ಹಾಕುವ ಚೌಕಿ ಮನೆಯ ತುಂಬೆಲ್ಲ ನೀರು ತುಂಬಿದೆ. ಇದರಿಂದ ಸೋಮವಾರ ರಾತ್ರಿಯ ಬಹುತೇಕ ಯಕ್ಷಗಾನಗಳು ರದ್ದಾಗಿವೆ.

ಉಡುಪಿ: ಫೆಂಗಲ್ ಚಂಡಮಾರುತದ ಅಬ್ಬರದಿಂದ ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಯಕ್ಷಗಾನ ಮೇಳಗಳಿಗೂ ಸಮಸ್ಯೆ ಎದುರಾಗಿದೆ. ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೆ ಮಳೆ ನೀರು ನುಗ್ಗಿದೆ. ವೇಷಧಾರಿಗಳು ಬಣ್ಣ ಹಾಕುವ ಚೌಕಿ ಮನೆಯ ತುಂಬೆಲ್ಲ ನೀರು ತುಂಬಿದೆ. ಇದರಿಂದ ಸೋಮವಾರ ರಾತ್ರಿಯ ಬಹುತೇಕ ಯಕ್ಷಗಾನಗಳು ರದ್ದಾಗಿವೆ. ಚೌಕಿ ಮನೆಯ ಒಳಗೆ ಧಾರಾಕಾರ ಮಳೆ ನೀರು ಹರಿದು ಹೋಗುತ್ತಿದೆ. ಮಳೆಗಾಲ ಮುಗಿದ ನಂತರವೇ ಯಕ್ಷಗಾನ ಆರಂಭವಾಗುವುದು ಪ್ರತೀತಿ. ಆದರೆ, ಈ ಬಾರಿ ಡಿಸೆಂಬರ್ ತಿಂಗಳಲ್ಲೂ ಮಳೆ ಸುರಿಯುತ್ತಿದೆ. ಇದರಿಂದ ಪ್ರದರ್ಶನಗಳು ರದ್ದಾದ ಕಾರಣ ಕಲಾವಿದರಿಗೆ ಪ್ರೇಕ್ಷಕರಿಗೆ ಬೇಸರವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ