ದಲಿತ ನಾಯಕರು ಊಟ ಮಾಡುವುದಕ್ಕೂ ನಿರ್ಬಂಧ ಹೇರಿದರೆ ಹೇಗೆ ಸ್ವಾಮಿ? ಪ್ರಿಯಾಂಕ್ ಖರ್ಗೆ

|

Updated on: Jan 13, 2025 | 1:21 PM

ಕಾಂಗ್ರೆಸ್ ಪಕ್ಷದ ದಲಿತ ನಾಯಕರು ಆಂತರಿಕ ಮೀಸಲಾತಿ, ದಲಿತ ವಿದ್ಯಾರ್ಥಿಗಳಿಗೆ ವಿದೇಶಗಳಿಂದ ಸಿಗುತ್ತಿದ್ದ ವಿದ್ಯಾರ್ಥಿ ವೇತನ ಬಂದ್ ಆಗಿದ್ದು ಮತ್ತು ಎಸ್​ಸಿಬಿಟಿಎಸ್​ಬಿ ಹಣ ದುರ್ಬಳಕೆ ಬಗ್ಗೆ ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಅರೋಪಗಳ ಬಗ್ಗೆ ಚರ್ಚೆ ನಡೆಸಲು ಉದ್ದೇಶಿಸಿದ್ದರು ಎಂದು ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ ಇಂದು ಸಾಯಂಕಾಲ ಸಿಎಸ್​​ಪಿ ಸಭೆ ಇದೆ ಎಂದರು

ಬೆಂಗಳೂರು: ಡಿನ್ನರ್ ಪಾರ್ಟಿ ಬೇಡ ಅಂದಿದ್ದು ಪಕ್ಷದ ಹೈಕಮಾಂಡ್ ಆದರೆ ಸಚಿವ ಪ್ರಿಯಾಂಕ್ ಖರ್ಗೆ ಊಟಮಾಡೋದು ಬೇಡ ಅಂದರೆ ಹೇಗೆ ಸ್ವಾಮಿ, ಮೀಟಿಂಗ್ ಮಾಡಿ ಅದರೆ ಊಟ ಬೇಡ ಅನ್ನೋದು ನಿಮ್ಮ ಮಾತಿನ ತಾತ್ಪರ್ಯನಾ ಅಂತ ಪ್ರಶ್ನಿಸಿದ್ದು ಮಾಧ್ಯಮಗಳನ್ನು! ಹೈಕಮಾಂಡ್​ ನವರು ಮೀಟಿಂಗ್ ಬೇಡ ಅಂತ ಹೇಳಿಲ್ಲ, ಅದರೆ ಕೊಂಚ ಮುಂದೂಡಿ ಅಂತ ಹೇಳಿದ್ದಾರೆ, ವರಿಷ್ಠರು ಸಹ ಅದರಲ್ಲಿ ಭಾಗಿಯಾಗುತ್ತಾರಂತೆ, ದಲಿತ ನಾಯಕರು ಕದ್ದುಮುಚ್ಚಿ ಏನೂ ಮೀಟಿಂಗ್ ಅಯೋಜಿಸಿರಲಿಲ್ಲ, ಅಧಿಕೃತವಾದ ಆಹ್ವಾನ ಪತ್ರಿಕೆ ನೀಡಿದ್ದರು, ಮುಂದೂಡಲಾಗಿದೆ ಅಂತಲೂ ಅವರು ಅಧಿಕೃತವಾಗೇ ತಿಳಿಸಿದ್ದಾರೆ, ಮೀಟಿಂಗ್ ಕರೆದ ಬಗ್ಗೆ ಯಾರಿಗೂ ಬೇಜಾರಿರಲಿಲ್ಲ ಎಂದು ಖರ್ಗೆ ಹೇಳಿದರು..

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್: ಪ್ರಿಯಾಂಕ್ ಖರ್ಗೆ ಆಪ್ತ ಸೇರಿ ಐವರ ಬಂಧನ