15 ದಿನ ರಜೆ ಹಾಕಿದ್ದೇವೆ, ಊಟ ಹಾಕಿಸ್ತೀವಿ: ‘ದಿ ಡೆವಿಲ್’ ಬಿಡುಗಡೆಗೆ ದರ್ಶನ್ ಫ್ಯಾನ್ಸ್ ತಯಾರಿ
ಈ ಸಿನಿಮಾಗಾಗಿಯೇ ಒಂದು ವಾರ, 15 ದಿನ ರಜೆ ಹಾಕಿದ್ದೇವೆ ಎಂದು ಫ್ಯಾನ್ಸ್ ಹೇಳಿದ್ದಾರೆ. ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಅನ್ನದಾನ ಮಾಡಲು ತೀರ್ಮಾನಿಸಲಾಗಿದೆ. ಹೋಳಿಗೆ ಊಟ ಹಾಕಿಸುವುದಾಗಿ ದರ್ಶನ್ ಫ್ಯಾನ್ಸ್ ಹೇಳಿದ್ದಾರೆ. ದರ್ಶನ್ ಅಭಿಮಾನಿಗಳು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
ನಟ ದರ್ಶನ್ (Darshan) ಮೇಲೆ ಅವರ ಅಭಿಮಾನಿಗಳಿಗೆ ಅಪಾರ ಪ್ರೀತಿ. ಈಗ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಹಬ್ಬದ ರೀತಿಯಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಬೆಂಗಳೂರಿನ ಜೆಪಿ ನಗರದ ಅಭಿಮಾನಿಗಳು ವಿಶೇಷವಾಗಿ ‘ದಿ ಡೆವಿಲ್’ (The Devil) ಸಿನಿಮಾವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿಯೇ ಒಂದು ವಾರ, 15 ದಿನ ರಜೆ ಹಾಕಿದ್ದೇವೆ ಎಂದು ಫ್ಯಾನ್ಸ್ ಹೇಳಿದ್ದಾರೆ. ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಅನ್ನದಾನ ಮಾಡಲು ತೀರ್ಮಾನಿಸಲಾಗಿದೆ. ಹೋಳಿಗೆ ಊಟ ಹಾಕಿಸುವುದಾಗಿ ದರ್ಶನ್ ಫ್ಯಾನ್ಸ್ ಹೇಳಿದ್ದಾರೆ. ಅಭಿಮಾನಿಗಳು ಮಾತನಾಡಿದ ವಿಡಿಯೋ ಇಲ್ಲಿದೆ. ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಕೂಡ ಅಭುಮಾನಿಗಳು ‘ದಿ ಡೆವಿಲ್’ ಸಿನಿಮಾವನ್ನು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
