‘ದಿ ಡೆವಿಲ್’ ಹಬ್ಬಕ್ಕೆ ಸಿಂಗಾರಗೊಂಡ ಚಿತ್ರಮಂದಿರಗಳು: ಜೋರಾಗಿದೆ ಕ್ರೇಜ್
ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ತೆರೆಕಾಣುತ್ತಿದೆ. ಈ ಸಿನಿಮಾವನ್ನು ದರ್ಶನ್ ತೂಗುದೀಪ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸುತ್ತಿದ್ದಾರೆ. ಎಲ್ಲ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಎಲ್ಲ ಚಿತ್ರಮಂದಿರಗಳನ್ನು ಸಿಂಗರಿಸಲಾಗಿದೆ. ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಫೋಟೋಗಳು ಇಲ್ಲಿವೆ ನೋಡಿ..
Updated on: Dec 10, 2025 | 8:05 PM

ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಅಭಿಮಾನಿಗಳೇ ಎಲ್ಲ ಕಡೆಗಳಲ್ಲಿ ಈ ಚಿತ್ರಕ್ಕೆ ಅದ್ದೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.

ಎಲ್ಲ ಚಿತ್ರಮಂದಿರಗಳನ್ನು ಸಿಂಗಾರ ಮಾಡಲಾಗಿದೆ. ಹಬ್ಬದ ರೀತಿಯಲ್ಲಿ ದರ್ಶನ್ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಪ್ರಕಾಶ್ ವೀರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

‘ಕಾಟೇರ’ ಸಿನಿಮಾದ ಸೂಪರ್ ಸಕ್ಸಸ್ ನಂತರ ದರ್ಶನ್ ಮಾಡಿದ ಸಿನಿಮಾ ‘ದಿ ಡೆವಿಲ್’. ಆ ಕಾರಣದಿಂದಲೂ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಮೂಡಿದೆ. ಆರಂಭದಿಂದಲೇ ಈ ಸಿನಿಮಾ ಹೈಪ್ ಸೃಷ್ಟಿಸಿತ್ತು.

ಮೊದಲ ದಿನದ ಎಲ್ಲ ಶೋಗಳು ಹೌಸ್ಫುಲ್ ಆಗಿವೆ. ಬೆಂಗಳೂರು, ಮೈಸೂರು ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಕೂಡ ‘ದಿ ಡೆವಿಲ್’ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣಲಿದೆ.

ಒಂದು ವೇಳೆ ದರ್ಶನ್ ಅವರು ಹೊರಗೆ ಇದ್ದಿದ್ದರೆ ಸಂಭ್ರಮಾಚರಣೆ ಇನ್ನೂ ಜೋರಾಗಿ ಇರುತ್ತಿತ್ತು. ಸದ್ಯ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿ ಇದ್ದಾರೆ.




