ಕೋರ್ಟ್ ಒಳಗೆ ನಡೆದ ವಾದ ಏನು? ಮಾಹಿತಿ ನೀಡಿದ ದರ್ಶನ್ ಪರ ವಕೀಲರು
‘ದರ್ಶನ್ ಅವರು ಖಂಡಿತವಾಗಿಯೂ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ಭಾಗಿ ಆಗಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ಯಾವುದೋ ಷಡ್ಯಂತ್ರದಿಂದ ಅವರ ಮೇಲೆ ವಿವಾದ ಎಳೆದಿದ್ದಾರೆ’ ಎಂದು ದರ್ಶನ್ ಪರ ವಕೀಲ ನಾರಾಯಣ ಸ್ವಾಮಿ ಹೇಳಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು (ಜೂನ್ 11) ನ್ಯಾಯಾಲಯದಲ್ಲಿ ಏನು ನಡೆಯಿತು ಎಂಬುದನ್ನು ಲಾಯರ್ ವಿವರಿಸಿದ್ದಾರೆ.
ನಟ ದರ್ಶನ್ (Darshan) ಈಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪ ದರ್ಶನ್ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪೊಲೀಸ್ ಕಸ್ಟಡಿಗೆ (Police Custody) ನೀಡಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಮುಗಿದ ಬಳಿಕ ಅವರ ಪರ ಲಾಯರ್ ನಾರಾಯಣ ಸ್ವಾಮಿ ‘ಟಿವಿ9 ಕನ್ನಡ’ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಕೋರ್ಟ್ನಲ್ಲಿ ಆಗಿರೋದು ಇಷ್ಟೇ. 15 ದಿನ ಕಸ್ಟಡಿಗೆ ಕೇಳಿದರು. ಆದರೆ ಅಷ್ಟು ದಿನ ಕಸ್ಟಡಿಗೆ ನೀಡಿಲ್ಲ. ಸ್ಟ್ರಾಂಗ್ ಆಗಿ ವಿರೋಧ ಮಾಡಿದ್ದರಿಂದ 6 ದಿನ ಕಸ್ಟಡಿಗೆ ನೀಡಿದ್ದಾರೆ. ಅದು ಕೂಡ ಕೇವಲ ವಿಚಾರಣೆ ಸಲುವಾಗಿ ಮಾತ್ರ. ವಕೀಲರನ್ನು ಪ್ರತಿ ದಿನ ಭೇಟಿ ಮಾಡಿಸಬೇಕು, ಪ್ರತಿ ಎರಡು ದಿನಕ್ಕೆ ತನಿಖೆಯ ವಿವರವನ್ನು ನ್ಯಾಯಾಲಯಕ್ಕೆ ನೀಡಬೇಕು ಅಂತ ಜಡ್ಜ್ ಸೂಚನೆ ನೀಡಿದ್ದಾರೆ’ ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ. ಅಲ್ಲದೇ, ಈ ಕೇಸ್ನಲ್ಲಿ ದರ್ಶನ್ ಅವರಿಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.