‘ಕೆಲವು ಅನುಮಾನ ಇತ್ತು, ಕೇಳಿದ್ದೇನೆ’: ದರ್ಶನ್ ಭೇಟಿ ಬಳಿಕ ಲಾಯರ್​ ಪ್ರತಿಕ್ರಿಯೆ

| Updated By: ಮದನ್​ ಕುಮಾರ್​

Updated on: Sep 12, 2024 | 10:56 PM

ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್​ ಅವರನ್ನು ವಕೀಲರು ಭೇಟಿ ಮಾಡಿದ್ದಾರೆ. ಚಾರ್ಜ್​ಶೀಟ್​ ಸಲ್ಲಿಕೆ ಆಗಿರುವುದರಿಂದ ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ದರ್ಶನ್​ ಭೇಟಿ ಬಳಿಕ ವಕೀಲರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ದರ್ಶನ್​ ಜೊತೆ ನಡೆದ ಮಾತುಕಥೆಯ ವಿವರ ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

‘ಜಾಮೀನು ಅರ್ಜಿ ಸಲ್ಲಿಕೆ ಮಾಡಲು ಇನ್ನೂ ಸಮಯ ಇದೆ. ಚಾರ್ಜ್​ಶೀಟ್​ನಲ್ಲಿ ಇರುವ ವಿಚಾರಗಳ ಬಗ್ಗೆ ದರ್ಶನ್​ ಜೊತೆ ಚರ್ಚೆ ಮಾತಾಡಿದ್ದೇವೆ. ಕೆಲವು ಅನುಮಾನಗಳು ಇದ್ದವು. ಅದಕ್ಕೆ ಸ್ಪಷ್ಟನೆ ತೆಗೆದುಕೊಂಡಿದ್ದೇವೆ. ಅದು ಏನು ಎಂಬುದನ್ನು ಇಲ್ಲಿ ಹೇಳೋಕೆ ಆಗಲ್ಲ. ನಾವೆಲ್ಲ ಇನ್ನೂ ಜಾರ್ಜ್​ಶೀಟ್​ ಓದುತ್ತಿದ್ದೇವೆ. ಹಿರಿಯರು ಇದ್ದಾರೆ. ಅವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ದರ್ಶನ್​ ಪರ ವಕೀಲರು ಬಳ್ಳಾರಿಯಲ್ಲಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.