‘ಕಾಟೇರ’ ಯಶಸ್ಸಿನ ಸಂಭ್ರಮ; ದರ್ಶನ್ಗೆ ‘ಭೂಮಿಪುತ್ರ’ ಬಿರುದು: ಇಲ್ಲಿದೆ ಲೈವ್ ವಿಡಿಯೋ..
ಪಾಂಡವಪುರದಲ್ಲಿ ‘ಕಾಟೇರ’ ಸಿನಿಮಾದ ಸಕ್ಸಸ್ ಸಮಾರಂಭ ನಡೆಯುತ್ತಿದೆ. ಚಿತ್ರತಂಡವನ್ನು ಅಭಿನಂದಿಸಲಾಗುತ್ತಿದೆ. ಕಲಾ ತಂಡಗಳು ಜತೆ ಜೋಡೆತ್ತಿನ ಮೆರವಣಿಗೆ ಮಾಡಲಾಗುತ್ತಿದೆ. ಇದರಲ್ಲಿ ದರ್ಶನ್ ಭಾಗಿ ಆಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದಾರೆ. ಸಂಜೆ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಅದರ ಲೈವ್ ವಿಡಿಯೋ ಇಲ್ಲಿದೆ.
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾದಲ್ಲಿ ತೋರಿಸಿದ ರೈತರ ಕಥೆ ಎಲ್ಲರಿಗೂ ಇಷ್ಟ ಆಗಿದೆ. ಈ ಸಿನಿಮಾದ ಯಶಸ್ಸನ್ನು ಚಿತ್ರತಂಡದವರು ಸಂಭ್ರಮಿಸುತ್ತಿದ್ದಾರೆ. ಇದರ ಜೊತೆಗೆ ದರ್ಶನ್ ಅವರಿಗೆ ‘ಕರ್ನಾಟಕ ರಾಜ್ಯ ರೈತ ಸಂಘ’ದ ಪರವಾಗಿ ‘ಭೂಮಿಪುತ್ರ’ ಎಂಬ ಹೊಸ ಬಿರುದನ್ನು ನೀಡಲಾಗುತ್ತಿದೆ. ‘ಕಾಟೇರ’ (Kaatera) ಯಶಸ್ಸಿಗಾಗಿ ಚಿತ್ರತಂಡವನ್ನು ಅಭಿನಂದಿಸಲಾಗುತ್ತಿದೆ. ಈ ಸಮಾರಂಭ ಇಂದು (ಜನವರಿ 26) ಪಾಂಡವಪುರದಲ್ಲಿ ನಡೆಯುತ್ತಿದೆ. ಕಲಾ ತಂಡಗಳು ಜೊತೆ ಜೋಡೆತ್ತಿನ ಮೆರವಣಿಗೆ ಮಾಡಲಾಗುತ್ತಿದೆ. ಅಪಾರ ಸಂಖ್ಯೆ ಅಭಿಮಾನಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಸಂಜೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡು ಮನರಂಜನೆ ನೀಡಲಿದ್ದಾರೆ. ಈ ಸಮಾರಂಭದ ಲೈವ್ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ