‘ದರ್ಶನ್ ಫ್ಯಾನ್ಸ್ಗೆ ನೋವಿದೆ, ನಾವು ಮಾತಾಡೋದು ತಪ್ಪಾಗತ್ತೆ, ಡೆವಿಲ್ ಗೆಲ್ಲಲಿ’: ಸುದೀಪ್
ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಆ ಸಿನಿಮಾಗೆ ಒಳ್ಳೆಯದಾಗಲಿ ಎಂದು ಸುದೀಪ್ ಅವರು ಹಾರೈಸಿದ್ದಾರೆ. ಇಂದು (ಸೆಪ್ಟೆಂಬರ್ 1) ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತಾಡಿದರು. ಕಿಚ್ಚ ಸುದೀಪ್ ಬರ್ತ್ಡೇ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ದರ್ಶನ್ ಬಗ್ಗೆ ಪ್ರಶ್ನೆ ಎದುರಾಯಿತು.
ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ (The Devil Movie) ಡಿಸೆಂಬರ್ 12ರಂದು ಬಿಡುಗಡೆ ಆಗಲಿದೆ. ಆ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಕಿಚ್ಚ ಸುದೀಪ್ ಅವರು ಹಾರೈಸಿದ್ದಾರೆ. ಇಂದು (ಸೆ.1) ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. ‘ಖಂಡಿತಾ ದರ್ಶನ್ (Darshan) ಸಿನಿಮಾಗೆ ಒಳ್ಳೆಯದಾಗಲಿ. ಯಾವುದೇ ಸಿನಿಮಾ ಆದರೂ ಚೆನ್ನಾಗಿ ಪ್ರದರ್ಶನ ಕಾಣಬೇಕು. ಅವರ ನೋವು ಅವರಿಗೆ ಇರುತ್ತೆ. ಅವರ ಅಭಿಮಾನಿಗಳಿಗೆ ನೋವು ಇರುತ್ತೆ ಎಂದಾಗ ನಾವು ಮಾತಾಡೋದು ತಪ್ಪಾಗತ್ತೆ. ಸರ್ಕಾರ, ಕಾನೂನು ಏನು ಮಾಡಬೇಕೋ ಮಾಡುತ್ತಾರೆ. ಅದಕ್ಕೆ ನಾವು ಅಡ್ಡ ಬರಬಾರದು. ತಪ್ಪು ಸರಿ ಅಲ್ಲಿ ನಿರ್ಧಾರ ಆಗುತ್ತೆ. ಯಾರದ್ದೇ ವಿಚಾರದಲ್ಲಿ ತಲೆ ಹಾಕಲು ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ. ನಾವು ಕೆಲವು ವಿಚಾರ ಮಾತಾಡಿದರೆ ಇನ್ನಷ್ಟು ಕೆಡಿಸುತ್ತದೆ. ಅದನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು’ ಎಂದು ಸುದೀಪ್ (Kichcha Sudeep) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

