ಶ್ಯೂರಿಟಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಪೂರ್ತಿಗೊಳಿಸಲು ದರ್ಶನ್ ಕೋರ್ಟ್ ಬಂದಿದ್ದರು: ದರ್ಶನ್ ವಕೀಲ
ಚಿಕಿತ್ಸೆಗಾಗಿ ದರ್ಶನ್ ತೂಗುದೀಪಗೆ ಮಧ್ಯಂತರ ಜಾಮೀನು ಮಂಜೂರು ಮಾಡುವಾಗ ಹೈಕೋರ್ಟ್ ಅವರ ಪಾಸ್ಪೋರ್ಟ್ ಅನ್ನು ಸರೆಂಡರ್ ಮಾಡಿಸಿಕೊಂಡಿತ್ತು. ಆದರೆ ಈಗ ಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದರಿಂದ ಅದನ್ನು ಸರೆಂಡರ್ ಮಾಡುವ ಅವಶ್ಯಕತೆಯಿಲ್ಲ, ಕೋರ್ಟ್ ಅದನ್ನು ವಾಪಸ್ಸು ನೀಡಿದೆ ಎಂದು ಅವರ ಪರ ವಕೀಲ ಹೇಳಿದರು. ದರ್ಶನ್ ಈಗ ಪುನಃ ಆಸ್ಪತ್ರೆಗೆ ವಾಪಸ್ಸಾಗಿದ್ದಾರೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿಯಾಗಿರುವ ನಟ ದರ್ಶನ್ ಗೆ ಉಚ್ಚ ನ್ಯಾಯಲಯದಿಂದ ಷರತ್ತುಬದ್ಧ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರೈಸಲು ಇಂದು ನ್ಯಾಯಾಲಯಕ್ಕೆ ಆಗಮಿಸಿದ್ದರು. ಅವರು ಹೈಕೋರ್ಟ್ ಗೆ ಬಂದುಹೋದ ವಿಚಾರವನ್ನು ಮಾಧ್ಯಮದವರಿಗೆ ವಿವರಿಸಿದ ಅವರ ವಕೀಲ, ಶ್ಯೂರಿಟಿಗಳನ್ನು ಸಲ್ಲಿಸಲು ಅವರು ಆಸ್ಪತ್ರೆಯಿಂದ ಹೈಕೋರ್ಟ್ ಗೆ ಬಂದಿದ್ದರು, ಶ್ಯೂರಿಟಿಗಳನ್ನು ಸಲ್ಲಿಸುವುದು ಜಾಮೀನು ಪಡೆಯುವ ಎಲ್ಲ ಆರೋಪಿಗಳಿಗೆ ಅನ್ವಯವಾಗುವ ವಿಷಯ ಕೇವಲ ದರ್ಶನ್ಗೆ ಮಾತ್ರ ಅಲ್ಲ ಎಂದು ವಕೀಲ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ ಆರೋಪಿಯೇ ಹೊರತು ಅಪರಾಧಿಯಲ್ಲ, ಆರೋಪಗಳು ಎಲ್ಲರ ಮೇಲೂ ಬರುತ್ತವೆ: ಭವ್ಯಾ, ಅಭಿಮಾನಿ