ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಎಲ್ಲಿಗೇ ಹೋದರೂ ಅಲ್ಲಿ ಜನರು ಸೇರುತ್ತಾರೆ. ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ನ್ಯಾಯಾಲಯದಿಂದ ಅನುಮತಿ ಪಡೆದು ದರ್ಶನ್ ಅವರು ಮೈಸೂರಿಗೆ ಭೇಟಿ ನೀಡಿದ್ದಾರೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಅವರು ಖಾಸಗಿ ಆಸ್ಪತ್ರೆಗೆ ಬಂದಿದ್ದಾರೆ. ಫ್ಯಾನ್ಸ್ ನೋಡಿ ಅವರು ಕೈ ಬೀಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ನಟ ದರ್ಶನ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ಮೈಸೂರಿಗೆ ತೆರಳಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ವಾಪಸ್ ಹೊರಡುವಾಗ ಅಭಿಮಾನಿಗಳತ್ತ ಅವರು ಕೈ ಬೀಸಿದರು. ‘ಬಾಸ್ ಬಾಸ್ ಡಿ ಬಾಸ್’ ಎಂದು ಫ್ಯಾನ್ಸ್ ಜೈಕಾರ ಕೂಗಿದ್ದಾರೆ. ದರ್ಶನ್ ಅವರನ್ನು ನೋಡಲು ಅಪಾರ ಸಂಖ್ಯೆಯ ಜನರು ಆಸ್ಪತ್ರೆ ಎದುರು ನೆರೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos