ದರ್ಶನ್ ತೂಗುದೀಪ: ನಟನನ್ನು ದೆಹಲಿಯ ತಿಹಾರ್ ಜೈಲಿಗೆ ಕಳಿಸುವುದೇ ವಾಸಿ ಅನ್ನುತ್ತಾರೆ ಮಾಜಿ ಜೈಲುವಾಸಿ ಶಿಗ್ಲಿ ಬಸ್ಯಾ!
ದರ್ಶನ್ ತೂಗುದೀಪ: ಬೆಂಗಳೂರಿನ ಸೆಂಟ್ರಲ್ ಜೈಲಿನ ಹಾಗೆ ಬಳ್ಳಾರಿ ಜೈಲಿನಲ್ಲೂ ಗಾಂಜಾ ಮತ್ತು ಇನ್ನಿತರ ಮಾದಕ ವಸ್ತುಗಳು ಸಿಗುತ್ತವೆ ಎಂದು ಶಿಗ್ಲಿ ಬಸ್ಯಾ ಹೇಳುತ್ತಾರೆ. ಬೆಂಗಳೂರು ಸೆಂಟ್ರಲ್ ಜೈಲು ಮತ್ತು ಬಳ್ಳಾರಿಯ ಕಾರಾಗೃಹಗಳಿಗೆ ಹೋಲಿಸಿದರೆ ಬಳ್ಳಾರಿ ಜೈಲು ಉತ್ತಮವಾಗಿದೆ ಅಂತ ಬಸ್ಯಾ ಹೇಳಿದರೂ ಅವರಾಡುವ ಮಾತುಗಳು ಗೊಂದಲಮಯವಾಗಿವೆ.
ಗದಗ: ಜಿಲ್ಲೆಯ ಶಿಗ್ಲಿ ಗ್ರಾಮದ ಬಸ್ಯಾ (ಅವರ ಪೂರ್ಣ ಹೆಸರು ಯಾರಿಗೂ ಗೊತ್ತಿಲ್ಲ, ಶಿಗ್ಲಿ ಬಸ್ಯಾ ಅಂತಲೇ ಖ್ಯಾತರು) ಕಳ್ಳತನದ ಅಪರಾಧಗಳನ್ನೆಸಗಿ ರಾಜ್ಯದ ಎಲ್ಲ ಜೈಲುಗಳಲ್ಲಿ ಇದ್ದು ಬಂದಿದ್ದಾರೆ ಮತ್ತು ಅವರ ಬದುಕಿನ 30 ವರ್ಷಗಳು ಜೈಲಗಳಲ್ಲಿ ಗತಿಸಿವೆ. ನಮ್ಮ ಗದಗ ವರದಿಗಾರ ಅವರೊಂದಿಗೆ ಮಾತಾಡಿದ್ದು ಬಸ್ಯಾ ಹೇಳುವ ಪ್ರಕಾರ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದು ತಪ್ಪು ನಿರ್ಧಾರ, ನಟನ ಆಗಮನದಿಂದ ಜೈಲಿನ ವಾತಾವರಣ ಹಾಳಾಗಲಿದೆ, ದರ್ಶನ್ ರಂಥ ಆರೋಪಿಗಳಿಗೆ ದೆಹಲಿಯಲ್ಲಿರುವ ತಿಹಾರ್ ಜೈಲೇ ಉತ್ತಮ ಸ್ಥಳ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ ಭೇಟಿಗೆ ಸೆಲೆಬ್ರಿಟಿಗಳಿಗಿಲ್ಲ ಅವಕಾಶ; ಜೈಲು ನೋಡಿ ದರ್ಶನ್ ಕಂಗಾಲು
Latest Videos