ದಾವಣಗೆರೆ ಸರ್ಕಾರಿ ಉರ್ದು ಶಾಲೆಯಲ್ಲಿ ಕೋತಿ ಕಾಟ: ಮಕ್ಕಳಿಗೆ ಕಚ್ಚಿ ಗಾಯ

ದಾವಣಗೆರೆ ಸರ್ಕಾರಿ ಉರ್ದು ಶಾಲೆಯಲ್ಲಿ ಕೋತಿ ಕಾಟ: ಮಕ್ಕಳಿಗೆ ಕಚ್ಚಿ ಗಾಯ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ವಿವೇಕ ಬಿರಾದಾರ

Updated on:Mar 25, 2024 | 9:31 AM

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಬಳಿ ಇರುವ ಹೊಸೂರು ಉರ್ದು ಸರ್ಕಾರಿ ಶಾಲೆಯಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ನಾಲ್ವರು ವಿದ್ಯಾರ್ಥಿಗಳಿಗೆ ಕಚ್ಚಿದೆ. ಕೋತಿಯ ಉಪಟಳ ಅಧಿಕವಾಗಿದ್ದು, ಆದಷ್ಟು ಬೇಗ ಅದನ್ನು ಹಿಡಿದು ಅರಣ್ಯಕ್ಕೆ ಬಿಡುವಂತೆ ಅರಣ್ಯ ಇಲಾಖೆಗೆ ಶಾಲಾ ಶಿಕ್ಷಕರು ಹಾಗೂ ಪಾಲಕರು ಆಗ್ರಹಿಸಿದ್ದಾರೆ.

ದಾವಣಗೆರೆ, ಮಾರ್ಚ್​​ 25: ಚನ್ನಗಿರಿ (Channagiri) ತಾಲೂಕಿನ ಸಂತೆಬೆನ್ನೂರಿನ (Santhebennur) ಬಳಿ ಇರುವ ಹೊಸೂರು ಉರ್ದು ಸರ್ಕಾರಿ ಶಾಲೆಯಲ್ಲಿ (Government Urdu School) ಕೋತಿಗಳ (Monkey) ಕಾಟ ಹೆಚ್ಚಾಗಿದ್ದು, ನಾಲ್ವರು ವಿದ್ಯಾರ್ಥಿಗಳಿಗೆ ಕಚ್ಚಿದೆ. ಕೋತಿ ಕಳೆದ ಮೂರು ತಿಂಗಳಿಂದ ಮಧ್ಯಾಹ್ನದ ಬಿಸಿಯೂಟದ ವೇಳೆ ಶಾಲೆಗೆ ಬಂದು, ಮಕ್ಕಳ ಮೇಲೆ ದಾಳಿ ಮಾಡುತ್ತಿದೆ. ಕೋತಿಯ ಕಾಟಕ್ಕೆ ಬೇಸತ್ತು ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳೆಲ್ಲರು ಸೇರಿ ಕೋತಿಯನ್ನು ಹಿಡಿದು ಸೂಳೆಕೆರೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಆದರೆ ಕೂತಿ ಮತ್ತೆ ಮತ್ತೆ ಶಾಲೆಗೆ ಬಂದು ಉಪಟಳ ನೀಡುತ್ತಿದೆ. ಕೋತಿ ಶಾಲೆಗೆ ಬರುತ್ತಿದ್ದಂತೆ ಶಿಕ್ಷಕರ ಕುರ್ಚಿ ಮೇಲೆ ಕುಳಿತುಕೊಳ್ಳುತ್ತದೆ. ನಂತರ ದಾಳಿ ಮಾಡುತ್ತದೆ. ಕೋತಿಯ ಉಪಟಳ ಅಧಿಕವಾಗಿದ್ದು, ಆದಷ್ಟು ಬೇಗ ಅದನ್ನು ಹಿಡಿದು ಅರಣ್ಯಕ್ಕೆ ಬಿಡುವಂತೆ ಅರಣ್ಯ ಇಲಾಖೆಗೆ ಶಾಲಾ ಶಿಕ್ಷಕರು ಹಾಗೂ ಪಾಲಕರು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ

Published on: Mar 25, 2024 09:30 AM