ಸಿಎಂ ಸಿದ್ದರಾಮಯ್ಯ ಸಂಧಾನ ಸಕ್ಸಸ್: ಪಲ್ಟಿ ಹೊಡೆದ ಪೈಲ್ವಾನ್

Updated on: Mar 27, 2026 | 3:16 PM

ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ನಿನ್ನೆ (ಮಾರ್ಚ್ 27) ದಾವಣಗೆರೆಯಲ್ಲಿ ಸಾಧಿಕ್ ಪೈಲ್ವಾನ್ ನಿವಾಸಕ್ಕೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದ್ರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ ಸಾಧಿಕ್ ಅವರನ್ನು ಸಿಎಂ ಬಳಿಕ ಕರೆತಂದು ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಸಾಧಿಕ್ ಪೈಲ್ವಾನ್ ಈ ಬಗ್ಗೆ ಯಾವುದೇ ಮಾತನಾಡದೇ ಸಂಜೆ ಹೇಳುತ್ತೇನೆಂದು ಮೌನವಾಗಿ ತೆರಳಿದ್ದಾರೆ.

ಬೆಂಗಳೂರು/ದಾವಣಗೆರೆ, (ಮಾರ್ಚ್ 27): ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ರಂಗೇರಿದ್ದು, ಇನ್ನೊಂದೆಡೆ ಕಾಂಗ್ರೆಸ್​​ಗೆ ಮುಸ್ಲಿಂ ಮತಗಳ ಆತಂಕ ಕಾಡುತ್ತಿದೆ. ಯಾಕಂದ್ರೆ ತಮ್ಮ ಸಮುದಾಯಕ್ಕೆ ಟಿಕೆಟ್ ಕೈತಪ್ಪಿದ್ದರಿಂದ ಮುಸ್ಲಿಮರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದು, ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಾಧಿಕ್ ಪೈಲ್ವಾನ್ ಪ್ರಮುಖರಾಗಿದ್ದು, ಕಾಂಗ್ರೆಸ್ ವೋಟ್ ಬ್ಯಾಂಕ್ ಒಡೆಯುತ್ತಾರೆ ಎನ್ನುವ ಭಯ ಇತ್ತು. ಆದ್ರೆ, ಇದೀಗ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಂಧಾನ ಯಶಸ್ವಿಯಾಗಿದ್ದು, ಪೈಲ್ವಾನ್ ಬಂಡಾಯ ಶಮನ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಆದ್ರೆ, ಪೈಲ್ವಾನ್ ಹೆಸರು ಮಾತ್ರ ಕಣದಲ್ಲಿ ಇರುತ್ರೆ.

ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ನಿನ್ನೆ (ಮಾರ್ಚ್ 27) ದಾವಣಗೆರೆಯಲ್ಲಿ ಸಾಧಿಕ್ ಪೈಲ್ವಾನ್ ನಿವಾಸಕ್ಕೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದ್ರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ ಸಾಧಿಕ್ ಅವರನ್ನು ಸಿಎಂ ಬಳಿಕ ಕರೆತಂದು ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಸಾಧಿಕ್ ಪೈಲ್ವಾನ್ ಈ ಬಗ್ಗೆ ಯಾವುದೇ ಮಾತನಾಡದೇ ಸಂಜೆ ಹೇಳುತ್ತೇನೆಂದು ಮೌನವಾಗಿ ತೆರಳಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ತಣ್ಣಗಾಗದ ಅಸಮಾಧಾನ, ಅಖಾಡದಲ್ಲೇ ಉಳಿದ ಪೈಲ್ವಾನ್, ಕಾಂಗ್ರೆಸ್​​ಗೆ ಟೆನ್ಷನ್

ಸಂಧಾನ ಸಭೆ ಬಳಿಕ ಮಾಧ್ಯಗಳಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯಿಸಿ, ನಾವು ಸಲೀಂ ಅಹ್ಮದ್ ಅವರು ಹೋಗಿ ಭೇಟಿ ಮಾಡಿ ಬಂದಿದ್ವಿ. ಸಾಧಿಕ್ ಪೈಲ್ವಾನ್ ಸಮೇತ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ದೇವೆ. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಗೆ ಲಾಭ ಆಗಬಾರದು. ಇದೇ ವಿಚಾರವಾಗಿ ಅವರು ಸಿಎಂ ಜೊತೆ ಮಾತಾಡಿದ್ದಾರೆ. ಸಂಜೆ 4 ಗಂಟೆಗೆ ಅವರು ಕೆಪಿಸಿಸಿ ತೆರಳಿ ತಮ್ಮ ಮನಸ್ಸಿನ ಮಾತುಗಳನ್ನ ಹಂಚಿಕೊಳ್ಳುತ್ತಾರೆ. ಸಾಧಿಕ್ ಒಪ್ಪಿಕೊಂಡಿದ್ದಾರೆ. ಶಮನ ಆಗುತ್ತೆ ಎಂದು ನಿನ್ನೆಯೇ ಹೇಳಿದ್ವಿ. ನಾವು ಹೇಳಿದ್ಮೇಲೆ ಒಪ್ಪಿಕೊಂಡು ಇಲ್ಲಿಗೆ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜೊತೆ ಇವರದ್ದು 40 ವರ್ಷ ಸಂಬಂಧ. ಡಿಸಿಎಂ, ಸುರ್ಜೇವಾಲಾ ಜೊತೆಗೂ ಮಾತಾಡುತ್ತಾರೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us