ದಾವಣಗೆರೆ: ಹಿಡಿಯುವಾಗ ಕೊರಳಿಗೆ ಸುತ್ತಿಕೊಂಡ ಕೇರೆ ಹಾವು! ಆಮೇಲೇನಾಯ್ತು? ವಿಡಿಯೋ ನೋಡಿ
ದಾವಣಗೆರೆಯ ಸ್ನೇಕ್ ಬಸಣ್ಣ ಹಾವು ಹಿಡಿಯವುದರಲ್ಲಿ ಎಕ್ಸ್ಪರ್ಟ್. ಆಗಾಗ ಅಲ್ಲಲ್ಲಿ ಹಾವು ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಾರೆ. ಆದರೆ, ಚಾಲಾಕಿ ಹಾವೊಂದು ಅವರನ್ನೇ ಯಾಮಾರಿಸಿದೆ. ಹಿಡಿಯುವ ಸಂದರ್ಭದಲ್ಲಿ ಅವರ ಕೊರಳನ್ನೇ ಸುತ್ತಿಕೊಂಡು ಭೀತಿ ಹುಟ್ಟಿಸಿದೆ. ಕೊನೆಗೆ ಅವರು ಅದ್ಹೇಗೋ ಹಾವಿನ ಕುಣಿಕೆಯಿಂದ ಬಚಾವಾಗಿ ಅದನ್ನು ಸೆರೆಹಿಡಿದಿದ್ದಾರೆ. ವಿಡಿಯೋ ಇಲ್ಲಿದೆ.
ದಾವಣಗೆರೆ, ಏಪ್ರಿಲ್ 30: ದಾವಣಗೆರೆ ನಗರದ ಎಪಿಎಂಸಿ ಆವರಣದಲ್ಲಿ ಕೇರೆ ಹಾವು ಹಿಡಿಯುವ ಸಂದರ್ಭದಲ್ಲಿ ಅದು ಸ್ನೇಕ್ ಬಸಣ್ಣ ಅವರ ಕೊರಳಿಗೆ ಸುತ್ತಿಕೊಂಡು ಕೆಲ ಕಾಲ ಆತಂಕದ ಸನ್ನಿವೇಶ ನಿರ್ಮಾಣ ಆಯಿತು. ತೀವ್ರ ತೊಂದರೆ ಅನುಭಸಿದ ಅವರು ನಂತರ ಅದ್ಹೇಗೋ ಕೊರಳಿಂದ ಹಾವನ್ನು ಬಿಡಿಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಹಾವು ಸುಮಾರು 7 ಅಡಿ ಉದ್ದ ಇತ್ತು. ವಿಡಿಯೋ ಇಲ್ಲಿದೆ ನೋಡಿ.
Published on: Apr 30, 2025 08:58 AM
Latest Videos

ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ

Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?

Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ

ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
