AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಕಾಂಗ್ರೆಸ್​​ ಗೆಲುವಿಗೆ ಕಾರಣ ಯಾರು? ಜಬ್ಬಾರ್​ ಸ್ಫೋಟಕ ಹೇಳಿಕೆ

ದಾವಣಗೆರೆಯಲ್ಲಿ ಕಾಂಗ್ರೆಸ್​​ ಗೆಲುವಿಗೆ ಕಾರಣ ಯಾರು? ಜಬ್ಬಾರ್​ ಸ್ಫೋಟಕ ಹೇಳಿಕೆ

ಪ್ರಸನ್ನ ಗಾಂವ್ಕರ್​
| Edited By: |

Updated on: May 06, 2026 | 5:10 PM

Share

ಕೆ. ಅಬ್ದುಲ್ ಜಬ್ಬಾರ್ ಅವರು ಬೈ-ಎಲೆಕ್ಷನ್ ಗೆಲುವಿನ ಶ್ರೇಯಸ್ಸು ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅರ್ಷದ್ ಅವರಿಗೆ ಸಲ್ಲುವುದನ್ನು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಗಳ ಗ್ಯಾರಂಟಿಗಳು ಮತ್ತು ಜಮೀರ್ ಅಹ್ಮದ್ ಪಾತ್ರವನ್ನು ಎತ್ತಿ ಹಿಡಿದಿದ್ದಾರೆ. ತಮ್ಮ ಅಮಾನತು ಹಾಗೂ ನಸೀರ್ ಅಹ್ಮದ್ ಅವರ ಕೊಡುಗೆ ಕುರಿತು ಮಾತನಾಡಿದ್ದಾರೆ.

ಬೆಂಗಳೂರು, ಮೇ 06: ನಾನು ರಿಸಲ್ಟ್ ಬರುವ ಮುಂಚೆಯೇ ಕಾಂಗ್ರೆಸ್ ಗೆಲ್ಲುತ್ತದೆ ಅಂತಾ ಹೇಳಿದ್ದೆ. ಮುಖ್ಯಮಂತ್ರಿಗಳ ಐದು ಗ್ಯಾರಂಟಿ ಯೋಜನೆಗಳು ಮತ್ತು ಸಚಿವ ಜಮೀರ್ ಅಹ್ಮದ್ ಅವರ ಭೇಟಿ ಕೂಡ ಕಾಂಗ್ರೆಸ್ ಗೆಲ್ಲುವುದಕ್ಕೆ ಪ್ರಮುಖ ಕಾರಣ ಎಂದು ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹೇಳಿದ್ದಾರೆ. ಆ ಮೂಲಕ  ಕಾಂಗ್ರೆಸ್​ನಲ್ಲಿ ಈಗ ಕ್ರೆಡಿಟ್ ವಾರ್ ಶುರುವಾಗಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಡಬಾರದು ಅಂತ ಜನ ತೀರ್ಮಾನ ಮಾಡಿದ್ರೆ ಕೊಡಲ್ಲ. ಜಮೀರ್ ಬಂದು ಹೋದ ಕಾರಣ ಅಸಮಾಧಾನ ಸರಿ ಹೋಗಿತ್ತು ಎಂದಿದ್ದಾರೆ. ಸಿಎಂ ಜೊತೆಗೆ ನಸೀರ್ ಅಹ್ಮದ್ ಹೋಗಿ ಪ್ರಚಾರ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಹೆಂಗೋ ಗೆದ್ದಿದ್ದೇವೆ, ಈಗಾಗಲೇ ಸಿಎಂ ನೂರು ಕೋಟಿ ಕೊಟ್ಟಿದ್ದಾರೆ. ಶಾಸಕರು ದಾವಣಗೆರೆ ದಕ್ಷಿಣ ಅಭಿವೃದ್ಧಿ ಮಾಡಲಿ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us