ಸಚಿವ ಸ್ಥಾನಕ್ಕೆ ಶಾಸಕರ ಲಾಬಿ: ಹೈಕಮಾಂಡ್ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
ಡಿಕೆ ಶಿವಕುಮಾರ್ (DK Shivakumar)ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ಕುರಿತು ಚರ್ಚೆಗಳು ಜೋರಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದೇ ಜೂನ್ 27ರಂದು ದೆಹಲಿಗೆ ಭೇಟಿ ನೀಡಿ ಪಕ್ಷದ ಹೈಕಮಾಂಡ್ (Congress High command) ನಾಯಕರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದ್ರೆ, ಇದೇ ಸಂಪುಟ ವಿಸ್ತರಣೆ ವಿಚಾರಕ್ಕೆ ಹೈಕಮಾಂಡ್ ಜತೆ ಚರ್ಚಿಸುವ ಮುನ್ನವೇ ದೆಹಲಿಯಿಂದ ಡಿಕೆ ಶಿವಕುಮಾರ್ಗೆ ಮಹತ್ವದ ಸೂಚನೆ ಬಂದಿದೆ. ಹೌದು....ಸಚಿವ ಸ್ಥಾನಕ್ಕಾಗಿ ಲಾಬಿಗೆ ಅವಕಾಶ ಕೊಡಬೇಡಿ ಎಂದ ಡಿಕೆ ಶಿವಕುಮಾರ್ ಅವರಗೆ ಹೈಕಮಾಂಡ್ ದೂರವಾಣಿ ಕರೆ ಮಾಡಿ ಸೂಚಿಸಿದೆ.
ಮುಖ್ಯಾಂಶಗಳು
- ಸಿಎಂ ಡಿಕೆ ಶಿವಕುಮಾರ್ ಸಚಿವ ಸಂಪುಟ ಸೇರಲು ಹೆಚ್ಚಾದ ಶಾಸಕರ ಲಾಬಿ
- ವಿವಿಧ ಮೂಲಗಳಿಂದ ಒತ್ತಡ ಹೇರುತ್ತಿರುವ ಶಾಸಕರು, ವಿಧಾನಪರಿತ್ ಸದಸ್ಯರು
- ಇದರ ಬೆನ್ನಲ್ಲೇ ಹೈಕಮಾಂಡ್, ಯಾವುದೇ ಲಾಬಿಗೆ ಅವಕಾಶ ನೀಡದಂತೆ ಡಿಕೆಶಿಗೆ ಖಡಕ್ ಸೂಚನೆ
ಬೆಂಗಳೂರು, (ಜೂನ್ 24): ಡಿಕೆ ಶಿವಕುಮಾರ್ (DK Shivakumar)ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ಕುರಿತು ಚರ್ಚೆಗಳು ಜೋರಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದೇ ಜೂನ್ 27ರಂದು ದೆಹಲಿಗೆ ಭೇಟಿ ನೀಡಿ ಪಕ್ಷದ ಹೈಕಮಾಂಡ್ (Congress High command) ನಾಯಕರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದ್ರೆ, ಇದೇ ಸಂಪುಟ ವಿಸ್ತರಣೆ ವಿಚಾರಕ್ಕೆ ಹೈಕಮಾಂಡ್ ಜತೆ ಚರ್ಚಿಸುವ ಮುನ್ನವೇ ದೆಹಲಿಯಿಂದ ಡಿಕೆ ಶಿವಕುಮಾರ್ಗೆ ಮಹತ್ವದ ಸೂಚನೆ ಬಂದಿದೆ. ಹೌದು….ಸಚಿವ ಸ್ಥಾನಕ್ಕಾಗಿ ಲಾಬಿಗೆ ಅವಕಾಶ ಕೊಡಬೇಡಿ ಎಂದ ಡಿಕೆ ಶಿವಕುಮಾರ್ ಅವರಗೆ ಹೈಕಮಾಂಡ್ ದೂರವಾಣಿ ಕರೆ ಮಾಡಿ ಸೂಚಿಸಿದೆ.
ಸಚಿವ ಸ್ಥಾನ ನೀಡಬೇಕೆಂದು ಹಲವು ಶಾಸಕರು, ವಿಧಾನಪರಿಷತ್ ಸದಸ್ಯರು ಪಟ್ಟು ಹಿಡಿದಿದ್ದು, ಈ ಸಂಬಂಧ ದೆಹಲಿಗೆ ತೆರಳಿ ಭಾರೀ ಲಾಬಿ ನಡೆಸಿದ್ದಾರೆ. ಇನ್ನೊಂದೆಡೆ ತಮ್ಮ ಶಾಸಕರನ್ನು ಮಂತ್ರಿ ಮಾಡಬೇಕೆಂದು ಕ್ಷೇತ್ರಗಳಲ್ಲಿ ಪ್ರತಿಭಟನೆಗಳು ಸಹ ನಡೆದಿವೆ. ಇನ್ನು ಸ್ವಾಮೀಜಿ, ಸಮುದಾಯದ ಮಠಾಧೀಶರು ಸೇರಿದಂತೆ ವಿವಿಧ ಮೂಲಗಲಿಂದ ಮಂತ್ರಿ ಸ್ಥಾನಕ್ಕೆ ಒತ್ತಡ ಹೇರುವ ಪ್ರಯತ್ನಗಳು ನಡೆದಿವೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಹೈಕಮಾಂಡ್, ಯಾವುದೇ ಕಾರಣಕ್ಕೂ ಇದು ತಾರಕ್ಕೆ ಹೋಗಬಾರದು ಎಂದು ಎಚ್ಚೆತ್ತುಕೊಂಡು ಕೂಡಲೇ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಸಚಿವ ಸ್ಥಾನಕ್ಕಾಗಿ ಲಾಬಿಗೆ ಅವಕಾಶ ನೀಡಬೇಡಿ. ಯಾವುದೇ ರೀತಿಯ ಲಾಬಿಯನ್ನು ಸಹಿಸಿಕೊಳ್ಳುವುದಿಲ್ಲ. ಸಂಪುಟ ವಿಸ್ತರಣೆ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತೆ ಎಂದು ಖಡಕ್ ಆಗಿ ಹೇಳಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್ಹೋಲ್ಗೆ ಬಿದ್ದ ಪೌರಕಾರ್ಮಿಕ
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಸಿಇಟಿ ರ್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA

