ಅಕ್ರಮ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು ಗೊಳಿಸಿದ ಪಾಲಿಕೆ ಸಿಬ್ಬಂದಿ: ಶಾಮಿಯಾನದಡಿ ಪಾಠ ಕೇಳ್ತಿರೋ ಮಕ್ಕಳು
ಅಕ್ರಮ ಕಟ್ಟಡದ ಆರೋಪದಡಿ ಖಾಸಗಿ ಶಾಲೆಯೊಂದನ್ನು ದಾವಣಗೆರೆ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ನೋಟಿಸ್ ಇಲ್ಲದೆ ನಡೆದ ಈ ತೆರವು ಕಾರ್ಯಾಚರಣೆಯನ್ನು ಪ್ರಶ್ನಿಸಲಾಗಿದ್ದು, ಮಕ್ಕಳ ಶಿಕ್ಷಣದ ಹಕ್ಕಿಗೆ ಅಡ್ಡಿಯಾಗದಂತೆ ಶಿಕ್ಷಕರು ಇದೀಗ ಶಾಲೆ ತೆರವುಗೊಳಿಸಿದ ಸ್ಥಳದಲ್ಲೇ ಶಾಮಿಯಾನ ಹಾಕಿ ಪಾಠ ಮಾಡುತ್ತಿದ್ದಾರೆ. ವಿಡಿಯೋ ಇಲ್ಲಿದೆ.
ದಾವಣಗೆರೆ, ಜನವರಿ 3: ಅಕ್ರಮ ಕಟ್ಟಡದ ಹೆಸರಿನಲ್ಲಿ ದಾವಣಗೆರೆಯ ಎಸ್ಓಜಿ ಕಾಲೋನಿಯಲ್ಲಿ ಜಿವಿಎಸ್ ಖಾಸಗಿ ಶಾಲೆ ಕಟ್ಟಡವನ್ನು ಪಾಲಿಕೆ ಸಿಬ್ಬಂದಿ ಏಕಾಏಕಿ ತೆರವುಗೊಳಿಸಿದ್ದಾರೆ. ಈ ವಿವಾದಾತ್ಮಕ ತೆರವು ಕಾರ್ಯಾಚರಣೆಯು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದೀಗ ಮಕ್ಕಳು ಶಾಮಿಯಾನದಡಿ ತಮ್ಮ ಪಾಠವನ್ನು ಮುಂದುವರಿಸುತ್ತಿದ್ದಾರೆ. ತೆರವು ಕಾರ್ಯಾಚರಣೆಗೆ ಯಾವುದೇ ಪೂರ್ವ ಸೂಚನೆ ಅಥವಾ ಮೌಖಿಕ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಪೋಷಕರು ಮತ್ತು ಶಾಲಾ ಆಡಳಿತ ಆರೋಪಿಸಿದೆ.
ಸದ್ಯ ಶಿಕ್ಷಕರು ಮಕ್ಕಳ ಭವಿಷ್ಯಕ್ಕಾಗಿ ಶಾಲೆ ತೆರವುಗೊಳಿಸಿದ ಅದೇ ಸ್ಥಳದಲ್ಲಿ ಶಾಮಿಯಾನ ಹಾಕಿ ತರಗತಿಗಳನ್ನು ಮುಂದುವರಿಸಿದ್ದಾರೆ. ಈ ಘಟನೆ ಪಾಲಿಕೆ ಕ್ರಮಗಳ ನ್ಯಾಯಸಮ್ಮತತೆ ಮತ್ತು ಮಕ್ಕಳ ಶಿಕ್ಷಣದ ಹಕ್ಕಿನ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡಿದ್ದವರ ತೆರವು ಮಾಡಿದ್ದಕ್ಕೆ ಅವರಿಗೆ ತಕ್ಷಣವೇ ಮನೆ ಹಂಚಿಕೆ ಮಾಡಲು ಮುಂದಾಗಿರುವ ಸರ್ಕಾರ, ಒತ್ತುವರಿ ತೆರವು ಹೆಸರಿನಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಸಿಯುತ್ತಿರುವುದು ವಿಪರ್ಯಾಸ.
