ಬುಲೆಟ್ ಏರಿ ಕಾಂಗ್ರೆಸ್ ಜನಾಂದೋಲನಕ್ಕೆ ಬಂದ ಡಿಕೆಶಿ, ಗ್ರ್ಯಾಂಡ್ ಎಂಟ್ರಿ ವಿಡಿಯೋ ಇಲ್ಲಿದೆ
ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಗೆ ಟಕ್ಕರ್ ನೀಡಲು ಕಾಂಗ್ರೆಸ್ ಸಹ ಅಲ್ಲಲ್ಲಿ ಜನಾಂದೋಲನ ಸಭೆ ಮಾಡುತ್ತಿದೆ. ಇಂದು ಮೊದಲ ಜನಾಂದೋಲ ಸಭೆ ರಾಮನಗರ ಜಿಲ್ಲೆಯ ಬಿಡಿದಿಯಲ್ಲಿ ನಡೆದಿದ್ದು, ಈ ಸಭೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಲೆಟ್ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟು ಗಮನಸೆಳೆದಿದ್ದಾರೆ.
ರಾಮನಗರ, (ಆಗಸ್ಟ್ 02): ಮುಡಾ, ವಾಲ್ಮೀಕಿ ಹಗರಣಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಕೈಗೊಂಡಿವೆ. ನಾಳೆಯಿಂದ (ಆಗಸ್ಟ್ 03) ಬೆಂಗಳೂರು ಟು ಮೈಸೂರು ಪಾದಯಾತ್ರೆಗೆ ಚಾಲನೆ ಸಿಗಲಿದೆ. ಈ ವಿಪಕ್ಷಗಳ ಪಾದಯಾತ್ರೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ಸಹ ಜನಾಂದೋಲ ಕಾರ್ಯಕ್ರಮ ನಡೆಸುತ್ತಿದೆ. ವಿಪಕ್ಷಗಳು ತೆರಳುವ ಮಾರ್ಗದಲ್ಲೇ ಕಾಂಗ್ರೆಸ್ ಸಭೆ ಮಾಡಲು ತೀರ್ಮಾನಿಸಿದೆ. ನಾಳೆ ಪಾದಯಾತ್ರೆ ಶುರುವಾಗಲಿದ್ದರಿಂದ ಇಂದು (ಆಗಸ್ಟ್ 02) ರಾಮನಗರದ ಬಿಡದಿಯಲ್ಲಿ ಕಾಂಗ್ರೆಸ್ ಜನಾಂದೋಲ ಸಭೆ ನಡೆದಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿ ಬಿಜೆ-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಈ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಬುಲೆಟ್ನಲ್ಲಿ ಬಂದು ಗಮನಸೆಳೆದಿದ್ದಾರೆ. ವಂಡರ್ಲಾ ಗೇಟ್ ನಿಂದ ಬಿಡದಿ ತನಕ ಶಾಸಕ ಎಚ್ ಸಿ ಬಾಲಕೃಷ್ಣ ಜೊತೆ ಬುಲೆಟ್ನಲ್ಲೇ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ