ಶಕ್ತಿ ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ನಗುತ್ತಾ ಕೊಟ್ಟ ಸಂದೇಶ

Updated on: Dec 19, 2025 | 4:06 PM

ರಾಜ್ಯ ಕಾಂಗ್ರೆಸ್​​ನಲ್ಲಿ ಕುರ್ಚಿ ಕಾಳಗ ದಿನೇ ದಿನೇ ತಾರಕಕ್ಕೇರ್ತಿದೆ. ಸಿಎಂ ಸಿದ್ದರಾಮಯ್ಯ ಬಣ ತಂತ್ರ ಹೆಣೆಯುತ್ತಿದ್ರೆ, ಡಿಕೆ ಬಣ ಕೂಡ ಪ್ರತಿತಂತ್ರ ರೂಪಿಸ್ತಿದೆ. ನಾಯಕರು ಒಂದ್ಕಡೆ ಡಿನ್ನರ್ ಮೀಟಿಂಗ್ ಮಾಡಿದ್ರೆ, ಮತ್ತೊಂದ್ಕಡೆ ಟೆಂಪಲ್ ರನ್ ಮಾಡ್ತಿದ್ದಾರೆ.. ಡಿಸಿಎಂ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಇವತ್ತು ಉತ್ತರ ಕನ್ನಡ ಜಿಲ್ಲೆಯ ಶಕ್ತಿಕೇಂದ್ರಗಳಿಗೆ ಭೇಟಿ ನೀಡಿದ್ರು. ಅಂಕೋಲಾ ತಾಲೂಕಿನ ಆಂದ್ಲೆಯಲ್ಲಿರೋ ಕರಾವಳಿ ಶಕ್ತಿದೇವಿ ಜಗದೀಶ್ವರಿ ಸನ್ನಿಧದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.

ಕಾರವಾರ, (ಡಿಸೆಂಬರ್ 19): ರಾಜ್ಯ ಕಾಂಗ್ರೆಸ್​​ನಲ್ಲಿ ಕುರ್ಚಿ ಕಾಳಗ ದಿನೇ ದಿನೇ ತಾರಕಕ್ಕೇರ್ತಿದೆ. ಸಿಎಂ ಸಿದ್ದರಾಮಯ್ಯ ಬಣ ತಂತ್ರ ಹೆಣೆಯುತ್ತಿದ್ರೆ, ಡಿಕೆ ಬಣ ಕೂಡ ಪ್ರತಿತಂತ್ರ ರೂಪಿಸ್ತಿದೆ. ನಾಯಕರು ಒಂದ್ಕಡೆ ಡಿನ್ನರ್ ಮೀಟಿಂಗ್ ಮಾಡಿದ್ರೆ, ಮತ್ತೊಂದ್ಕಡೆ ಟೆಂಪಲ್ ರನ್ ಮಾಡ್ತಿದ್ದಾರೆ.. ಡಿಸಿಎಂ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಇವತ್ತು ಉತ್ತರ ಕನ್ನಡ ಜಿಲ್ಲೆಯ ಶಕ್ತಿಕೇಂದ್ರಗಳಿಗೆ ಭೇಟಿ ನೀಡಿದ್ರು. ಅಂಕೋಲಾ ತಾಲೂಕಿನ ಆಂದ್ಲೆಯಲ್ಲಿರೋ ಕರಾವಳಿ ಶಕ್ತಿದೇವಿ ಜಗದೀಶ್ವರಿ ಸನ್ನಿಧದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ಯಾವತ್ತೂ ಅವರು 5 ವರ್ಷ ಇರಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಅವರ ಪರವಾಗಿಲ್ಲವೆಂದು ಕೂಡ ನಾನು ಹೇಳಿಲ್ಲ. ಅವರ ಪರವಾಗಿ ಹೈಕಮಾಂಡ್ ಇರುವುದಕ್ಕೆ ಸಿಎಂ ಆಗಿರೋದು. ನಾನು ಅವರು ಇಬ್ಬರು ಒಂದ ಒಪ್ಪಂದಕ್ಕೆ ಬಂದಿದ್ದೇವೆ. ಹೈಕಮಾಂಡ್ ಕೂಡ ಒಂದು ಒಪ್ಪಂದಕ್ಕೆ ತಂದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಡಿಕೆಶಿ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಹಾಗಾದ್ರೆ, ಹೈಕಮಾಂಡ್ ತಂದಿರುವ ಒಪ್ಪಂದ ಏನು ಎನ್ನುವುದೇ ನಿಗೂಢವಾಗಿದ್ದು, ಕಾಂಗ್ರೆಸ್​​ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕೆಲ ವರ್ಷಗಳ ಹಿಂದೆ ಆಂದ್ಲೆ ದೇವಿಯಲ್ಲಿ ಬೇಡಿಕೆ ಇಟ್ಟಿದ್ದೆ. ಬೇಡಿಕೆ ಈಡೇರಿದ್ದಕ್ಕೆ ಇಂದು ದೇವಿಯ ಆಶೀರ್ವಾದ ಪಡೆದಿದ್ದೇನೆ ಎಂದರು. ಇದೇ ವೇಳೆ ದೇವಿ ಈ ಹಿಂದಿನ ರೀತಿ ಈ ಬಾರಿಯೂ ಒಂದು ದಿನಾಂಕ ಹೇಳಿದ್ಲಾ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಡಿಕೆಶಿ ಖುಷಿಯಲ್ಲಿ ನಗುತ್ತಾ ತೆರಳಿದರು.

Published on: Dec 19, 2025 03:54 PM