Delhi Election Result Live: ಬಿಜೆಪಿಗೆ ಮುನ್ನಡೆ, ದೆಹಲಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಆರಂಭಿಕ ಹಂತದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಸುಮಾರು 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಈಗಾಗಲೇ ಮ್ಯಾಜಿಕ್ ನಂಬರ್ ದಾಟಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮಟ್ಟಿದೆ. ವಿಡಿಯೋ ಇಲ್ಲಿದೆ ನೋಡಿ.
ನವದೆಹಲಿ, ಫೆಬ್ರವರಿ 7: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗದ್ದುಗೆ ಪೈಪೋಟಿಗೆ ಇಂದು ತೆರೆ ಬೀಳಲಿದೆ. ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಆರಂಭಿಕ ಹಂತದಲ್ಲಿ ಇದೀಗ ಬಿಜೆಪಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸುಮಾರು ಮೂವತ್ತು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಈಗಾಗಲೇ ಬಹುಮತಕ್ಕಿಂತ ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವುದರಿಂದ, ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಕಾಣಿಸಿದೆ. ದೆಹಲಿಯ ವಿವಿಧ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ವಿಡಿಯೋ ಇಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Feb 08, 2025 11:01 AM
Latest Videos

ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್ಎ ಕಚೇರಿಗೆ ನುಗ್ಗಿ ಕಳ್ಳತನ

ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್

ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್ನಲ್ಲಿ ಸಂಭ್ರಮಾಚರಣೆ

ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
