ಗುಜರಾತ್ ನಲ್ಲಿ ಅರವಿಂದ ಕೇಜ್ರಿವಾಲ್ ಗೆ ಭಾರಿ ಸ್ವಾಗತ, ಱಲಿಯಲ್ಲಿ ಜನಸಾಗರ!
ಗುಜರಾತ್ ಪ್ರವಾಸಕ್ಕೆ ಅರವಿಂದ ಕೇಜ್ರಿವಾಲ್ ಅವರು ಪೂರ್ವತಯಾರಿ ಮಾಡಿಕೊಂಡೇ ಬಂದಿದ್ದಾರೆ. ಅವರು ಮತ್ತು ಭಗವಂತ್ ಮಾನ್ ಅವರು ಱಲಿಯಲ್ಲಿ ಪಾಲ್ಗೊಳ್ಳುವ ಮೊದಲು ಸಾಬರಮತಿಯ ಮಹಾತ್ಮಾ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ ರಾಷ್ಟ್ರಪಿತ ಪ್ರತಿಮೆಗೆ ನಮಸ್ಕರಿಸಿದ್ದಾರೆ ಮತ್ತು ಚರಕವನ್ನು ತಿರುಗಿಸಿದ್ದಾರೆ
ಅಹಮದಾಬಾದ್: ಯಾರೇನೇ ಹೇಳಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ಜನಪ್ರಿಯತೆ (popularity) ದಿನೇದಿನೆ ಹೆಚ್ಚುತ್ತಿದ್ದೆ ಮಾರಾಯ್ರೇ. ಈ ವಿಡಿಯೋ ನೋಡಿದರೆ ನಾವು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತದೆ. ಪಂಜಾಬ್ ನಲ್ಲಿ (Punjab) ಸಾಧಿಸಿದ ಪ್ರಚಂಡ ಗೆಲುವು ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಧೂಳಿಪಟ ಮಾಡಿ ಭಗವಂತ್ ಮಾನ್ ಅವರ ನೇತೃತ್ವದಲ್ಲಿ ಸರ್ಕಾರ ರಚಿಸಿದೆ. ಗೋವಾ ವಿಧಾನಸಭಾ ಚುನಾವಣೆಯಲ್ಲೂ ಆಪ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆದ್ದರು. ಯಾರಿಗ್ಗೊತ್ತು, ಮುಂದಿನ ಚುನಾವಣೆಯಲ್ಲಿ ಆಪ್ ಗೋವಾನಲ್ಲೂ ಸರಕಾರ ರಚಿಸಬಹುದು. ಓಕೆ, ಕೆಜ್ರಿವಾಲ್ ಈಗ ಗುಜರಾತ್ ಮೇಲೆ ಕಣ್ಣಿಟ್ಟಿದ್ದಾರೆ. ಹಾಗೆ ನೋಡಿದರೆ ದೆಹಲಿಯ ಮುಖ್ಯಮಂತ್ರಿಗಳಾದ ಮೇಲೆ ಅವರು ಮೊದಲ ಬಾರಿಗೆ ಗುಜರಾತ್ ಗೆ ಭೇಟಿ ನೀಡಿದ್ದಾರೆ.
ಒಂದು ವಿಷಯವನ್ನು ನಾವಿಲ್ಲಿ ಗಮನಿಸಬೇಕು. ಎರಡು ದಿನಗಳ ಗುಜರಾತ್ ಪ್ರವಾಸಕ್ಕೆ ಅರವಿಂದ ಕೇಜ್ರಿವಾಲ್ ಅವರು ಪೂರ್ವತಯಾರಿ ಮಾಡಿಕೊಂಡೇ ಬಂದಿದ್ದಾರೆ. ಅವರು ಮತ್ತು ಭಗವಂತ್ ಮಾನ್ ಅವರು ಱಲಿಯಲ್ಲಿ ಪಾಲ್ಗೊಳ್ಳುವ ಮೊದಲು ಸಾಬರಮತಿಯ ಮಹಾತ್ಮಾ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ ರಾಷ್ಟ್ರಪಿತ ಪ್ರತಿಮೆಗೆ ನಮಸ್ಕರಿಸಿದ್ದಾರೆ ಮತ್ತು ಚರಕವನ್ನು ತಿರುಗಿಸಿದ್ದಾರೆ. ಆಶ್ರಮದಲ್ಲಿ ಗಾಂಧಿ ಮತ್ತು ಕಸ್ತೂರ್ ಬಾ ಅವರು ವಾಸವಾಗಿದ್ದ ಹೃದಯ್ ಕುಂಜ್ ನಲ್ಲೂ ಅವರು ಸ್ವಲ್ಪ ಸಮಯವನ್ನು ಕಳೆದಿದ್ದಾರೆ
आज गुजरात के साबरमती आश्रम जाने का सौभाग्य मिला। यह आश्रम एक आध्यात्मिक स्थान है, ऐसा प्रतीत होता है कि जैसे यहाँ गांधी जी की पूज्य आत्मा बसती है। यहाँ आकर आध्यात्मिक अनुभूति होती है। मैं स्वयं को धन्य मानता हूँ कि मैं भी उस देश में पैदा हुआ जिस देश में गाँधी जी पैदा हुए। pic.twitter.com/oUg2yOGMlq
— Arvind Kejriwal (@ArvindKejriwal) April 2, 2022
ಕೇಜ್ರಿವಾಲ್ ಅವರ ಱಲಿ ನೋಡಿ ಮಾರಾಯ್ರೇ. ಅಕ್ಷರಶಃ ಜನಸಾಗರ. ಅವರನ್ನು ನೋಡಲು ಜನ ಮಾಳಿಗೆಳನ್ನು ಹತ್ತಿ ನಿಂತಿದ್ದಾರೆ. ತಮಗೆ ಇಂಥ ಅಭೂತಪೂರ್ವ ಬೆಂಬಲ ಸಿಕ್ಕೀತೆಂದು ಖುದ್ದು ಆಪ್ ನಾಯಕರು ಅಂದುಕೊಂಡಿರಲಾರರು. ಜನಸ್ತೋಮ ಕಂಡು ಆಡಳಿಯ ಪಕ್ಷವೂ ಹೌಹಾರಿರಬಹುದು. ಇದು ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ. ಕೇಜ್ರಿವಾಲ ಒಬ್ಬ ಔಟ್ ಅಂಡ್ ಔಟ್ ಔಟ್ ಸೈಡರ್. ಆದರೆ ಱಲಿ ನೋಡಿದರೆ ಹಾಗನಿಸುತ್ತದೆಯೇ?
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಯೆದುರು ಬಿಜೆಪಿ ಬೆಂಬಲಿಗರ ಪ್ರತಿಭಟನೆ; ತೇಜಸ್ವಿ ಸೂರ್ಯ ಮುಂದಾಳತ್ವ, ಗೇಟ್ ಧ್ವಂಸ