ರೈತ ಸಮುದಾಯ ಕೃಷಿ ಚಟುವಟಿಕೆಗಳನ್ನು ಆರಂಭಿಸುವುದೇ ಯುಗಾದಿ ಹಬ್ಬದಂದು!
ಮಹಿಳೆಯರು ಮತ್ತು ಮಕ್ಕಳು ಸೇರದಂತೆ ಎಲ್ಲರೂ ಜಮೀನಲ್ಲಿ ಜಮಾಯಿಸಿದ್ದಾರೆ. ರಂಟೆ ಹೊಡೆಯುವ ಕೆಲಸ ಆರಂಭಿಸುವ ಮೊದಲು ಅವರೆಲ್ಲ ಭೂಮಿ ಪೂಜೆ ಮಾಡಿದ್ದಾರೆ. ಆಮೇಲೆ ಎತ್ತುಗಳು ಮತ್ತು ಟ್ರ್ಯಾಕ್ಟರ್ ಗಳ ಮೂಲಕ ನೇಗಿಲು ಹೊಡೆಯರಾಂಭಿಸುತ್ತಾರೆ.
ಯುಗಾದಿ (Ugadi) ಹಬ್ಬದ ವಿಶೇಷತೆಯೇ ಅಂಥದ್ದು. ಹಿಂದೂಗಳ ಹೊಸ ವರ್ಷ ಹಬ್ಬದ ಆಚರಣೆಯೊಂದಿಗೆ ಆರಂಭವಾಗುತ್ತದೆ. ಭಾರತೀಯರೆಲ್ಲರಿಗೆ ಅದರಲ್ಲೂ ವಿಶೇಷವಾಗಿ ರೈತಾಪಿ ಜನರಿಗೆ (farmers) ಇದು ಬಹುದೊಡ್ಡ ಹಬ್ಬ. ರೈತ ಸಮುದಾಯವು ಕೃಷಿ ಚಟುವಟಿಕೆಗಳನ್ನು ಯುಗಾದಿ ಹಬ್ಬದ ದಿನದಂದು ಆರಂಭಿಸುತ್ತಾರೆ. ನಮಗೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲ್ಲೂಕಿನ ಕಡೂರು (Kadur) ಗ್ರಾಮದಲ್ಲಿ ಒಂದು ರೈತಾಪಿ ಕುಟುಂಬವು ಶನಿವಾರದಂದು ತಮ್ಮ ಜಮೀನಲ್ಲಿ ಕೃಷಿ ಕೆಲಸ ಆರಂಭಿಸಿ ಹಬ್ಬ ಆಚರಿಸಿದ ವಿಡಿಯೋ ಸಿಕ್ಕಿದೆ. ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಬ್ರಮವೇ ಹಾಗೆ ಮಾರಾಯ್ರೇ. ಕುಟುಂಬವೊಂದರ ಸದಸ್ಯರು ಉಪಜೀವನ ನಡೆಸಲು ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದರೂ ಹಬ್ಬಕ್ಕೆ ಊರಿಗೆ ಬರುತ್ತಾರೆ. ಉತ್ತರ ಕರ್ನಾಟಕದ ರೈತ ಕುಟುಂಬಗಳ ಅನೇಕ ಜನ ಬೆಂಗಳೂರಿಗೆ ವಲಸೆ ಬಂದು ತಮ್ಮಲ್ಲಿ ಕೌಶಲ್ಯವಿರುವ ಕೆಲಸಗಳನ್ನು ಮಾಡಿಕೊಂಡಿದ್ದಾರೆ.
ಯುಗಾದಿ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭಗಳಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ವಿವಿಧ ಜಿಲ್ಲೆಗಳಿಗೆ ವಿಶೇಷ ಬಸ್ಗಳನ್ನು ಓಡಿಸುವ ಸಂಗತಿ ನಮಗೆ ಗೊತ್ತಿದೆ. ಅದರರ್ಥ ಲಕ್ಷಾಂತರ ಜನ ದುಡಿದು ತಿನ್ನಲು ನಗರಕ್ಕೆ ಬಂದಿದ್ದಾರೆ. ಬೆಂಗಳೂರು ಮಾತ್ರ ಅಲ್ಲ, ಮೈಸೂರು, ಚೆನ್ನೈ, ಹೈದರಾಬಾದ್, ಮುಂಬೈ, ಪಣಜಿ ಮೊದಲಾದ ನಗರಗಳಲ್ಲೂ ಅಸಂಖ್ಯಾತ ಕನ್ನಡಿಗರಿದ್ದಾರೆ.
ಕಡೂರು ಗ್ರಾಮದ ರೈತಾಪಿ ಕುಟಂಬದ ವಿಷಯಕ್ಕೆ ಬರೋಣ ಮಾರಾಯ್ರೇ. ಮಹಿಳೆಯರು ಮತ್ತು ಮಕ್ಕಳು ಸೇರದಂತೆ ಎಲ್ಲರೂ ಜಮೀನಲ್ಲಿ ಜಮಾಯಿಸಿದ್ದಾರೆ. ರಂಟೆ ಹೊಡೆಯುವ ಕೆಲಸ ಆರಂಭಿಸುವ ಮೊದಲು ಅವರೆಲ್ಲ ಭೂಮಿ ಪೂಜೆ ಮಾಡಿದ್ದಾರೆ. ಆಮೇಲೆ ಎತ್ತುಗಳು ಮತ್ತು ಟ್ರ್ಯಾಕ್ಟರ್ ಗಳ ಮೂಲಕ ನೇಗಿಲು ಹೊಡೆಯರಾಂಭಿಸುತ್ತಾರೆ. ಹಬ್ಬದ ಮೃಷ್ಟಾನ್ನ ಭೋಜನವನ್ನು ಜಮೀನಿಗೆ ಹೊತ್ತು ತಂದಿದ್ದಾರೆ. ಕೆಲಸ ಮುಗಿಸಿದ ಬಳಿಕ ಮರದ ಕೆಳಗೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಸವಿಯುತ್ತಾರೆ. ಎಷ್ಟು ಚಂದ ಅಲ್ಲವಾ ಮಾರಾಯ್ರೇ!
ಇದನ್ನೂ ಓದಿ: Ugadi Special 2022 : ಯುಗಾದಿಗೆ ಹಲವು ನಾಮ, ಪ್ರಕೃತಿ ಸಂಭ್ರಮಿಸುವ ಪರ್ವ ಕಾಲ ಈ ಯುಗಾದಿ!