ದಲಿತ ಮುಖ್ಯಮಂತ್ರಿ ಬೇಡಿಕೆ ಚುನಾವಣೆ ಸಮಯದಲ್ಲಿ ಪ್ರಸ್ತಾಪಿಸಬಾರದಿತ್ತು: ಸತೀಶ್ ಜಾರಕಿಹೊಳಿ, ಸಚಿವ

Updated on: Mar 07, 2024 | 4:06 PM

ಇದು ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ವಿಷಯವಲ್ಲ ಮತ್ತು ಚುನಾವಣಾ ಸಮಯದಲ್ಲಿ ಇದನ್ನು ಪ್ರಸ್ತಾಪಿಸಬಾರದಿತ್ತು ಎಂದ ಸತೀಶ್ ರಾಜಕೀಯದಲ್ಲಿ ಕುತಂತ್ರ ಹೊಸದಲ್ಲ, ಅಸಲಿಗೆ ರಾಜಕೀಯವೆಂದರೆ ಕುತಂತ್ರ, ಒಬ್ಬರು ಮತ್ತೊಬ್ಬರನ್ನು ತುಳಿಯುವುದು ಎಲ್ಲ ಪಕ್ಷಗಳಲ್ಲಿ ನಡೆಯುತ್ತದೆ ಅಂತ ಹೇಳಿದರು.

ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ದಲಿತ ಮುಖ್ಯಮಂತ್ರಿಗಾಗಿ (Dalit CM) ಬೇಡಿಕೆ ಇಂದು ನಿನ್ನೆಯದಲ್ಲ, ದಶಕಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು. ಈ ವಿಷಯದಲ್ಲಿ ತಮ್ಮ ಪಕ್ಷ 99 ರವರೆಗೆ ಬಂದು ಔಟಾಗಿಬಿಡುತ್ತದೆ, ಸೆಂಚುರಿ (century) ಬಾರಿಸಲ್ಲ ಎಂದು ನಗುತ್ತಾ ಹೇಳಿದರು. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ಮತ್ತೊಮ್ಮೆ ತೇಲಿಬಿಟ್ಟಿರುವುದರಿಂದ ದಲಿತ ಸಿಎಂ ವಿಷಯವನ್ನು ಮುನ್ನೆಲೆಗೆ ತರಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಅದಕ್ಕೂ ಇದಕ್ಕೂ ಸಂಬಂಧವಿಲ್ಲ, ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ 20-25 ವರ್ಷಗಳಿಂದ ಮುಖ್ಯಮಂತ್ರಿಯಾಗುವ ಕನಸು ಹೊತ್ತಿದ್ದಾರೆ, ಈ ವಿಷಯವೇ ಬೇರೆ ಎಂದು ಸಚಿವ ಹೇಳಿದರು. ಆದರೆ ಇದು ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ವಿಷಯವಲ್ಲ ಮತ್ತು ಚುನಾವಣಾ ಸಮಯದಲ್ಲಿ ಇದನ್ನು ಪ್ರಸ್ತಾಪಿಸಬಾರದಿತ್ತು ಎಂದ ಅವರು ರಾಜಕೀಯದಲ್ಲಿ ಕುತಂತ್ರ ಹೊಸದಲ್ಲ, ಅಸಲಿಗೆ ರಾಜಕೀಯವೆಂದರೆ ಕುತಂತ್ರ, ಒಬ್ಬರು ಮತ್ತೊಬ್ಬರನ್ನು ತುಳಿಯುವುದು ಎಲ್ಲ ಪಕ್ಷಗಳಲ್ಲಿ ನಡೆಯುತ್ತದೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸತೀಶ್ ಜಾರಕಿಹೊಳಿ ಮತ್ತು ದಲಿತ ನಾಯಕರು ದೆಹಲಿಯಲ್ಲಿ; ಮೂರು ಡಿಸಿಎಂ ಸ್ಥಾನಗಳಾಗಬೇಕೆಂದು ಹೈಕಮಾಂಡ್ ಬಳಿ ಮನವಿ?

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More