ಮಾಸ್ಕ್ ಧರಿಸುವಂತೆ ದುಂಬಾಲು ಬೀಳುತ್ತಿರುವ ಬಿಬಿಎಮ್ಪಿ ಮಾರ್ಷಲ್ಗಳು, ಉಡಾಫೆ ಮನೋಭಾವ ಬಿಡುತ್ತಿಲ್ಲ ಜನ
ಮಾಸ್ಕ್ ಧರಿಸುವುದು ಜನರಿಗೆ ಹಿಂಸೆಯಾಗಿ ಭಾಸವಾಗುತ್ತಿದೆ. ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೆ, ಧರಿಸಿದರೂ ಅದರಿಂದ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಕವರ್ ಮಾಡದೆ ಓಡಾಡುವವರ ಸಂಖ್ಯೆ ಕಡಿಮೆ ಇಲ್ಲ.
ಕೋವಿಡ್-19 ಮೂರನೇ ಅಲೆಯ ಆರಂಭ ಮತ್ತು ಭಾರತಕ್ಕೆ ಒಮೈಕ್ರಾನ್ ರೂಪಾಂತರಿಯ ಪ್ರವೇಶದ ನಡುವೆ ನಿಕಟ ಸಂಬಂಧ ಇರುವಂತಿದೆ ಮಾರಾಯ್ರೇ. ಕರ್ನಾಟಕ ಆರಂಭಿಕ ಹಂತದಲ್ಲೇ ಎಚ್ಚೆತ್ತುಕೊಂಡು ಸಾಧ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಓಮೈಕ್ರಾನ್ ರೂಪಾಂತರಿ ಸೋಂಕಿನ ಪ್ರಕರಣಗಳು ಭಾರತದಲ್ಲಿ ಸ್ವಲ್ಪ ಸ್ವಲ್ಪವಾಗಿ ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ಎರಡು ಪ್ರಕರಣಗಳಿಂದ ಶುರುವಾದ ಸಂಖ್ಯೆ ಸೋಮವಾರದಂದು 23 ತಲುಪಿದೆ. ಹೊಸ ರೂಪಾಂತರಿಗೆ ಹೆದರುವ ಅವಶ್ಯಕತೆ ಇಲ್ಲವೆಂದು ತಜ್ಞರು ಹೇಳುತ್ತಿರುವುದು ನಿಜವಾದರೂ, ಜನರಲ್ಲಿ ಆತಂಕ ಮನೆ ಮಾಡಿದೆ.
ಮಾಸ್ಕ್ ಧರಿಸುವುದು ಜನರಿಗೆ ಹಿಂಸೆಯಾಗಿ ಭಾಸವಾಗುತ್ತಿದೆ. ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೆ, ಧರಿಸಿದರೂ ಅದರಿಂದ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಕವರ್ ಮಾಡದೆ ಓಡಾಡುವವರ ಸಂಖ್ಯೆ ಕಡಿಮೆ ಇಲ್ಲ. ಹಾಗಾಗಿ. ಕೆ ಆರ್ ಮಾರ್ಕೆಟ್, ಮೆಜೆಸ್ಟಿಕ್ ಮತ್ತು ಜನನಿಬಿಡ ಸ್ಥಳಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ ಬಿ ಎಮ್ ಪಿ) ಮಾರ್ಷಲ್ಗಳನ್ನು ನಿಯೋಜಿಸಲು ಆರಂಭಿಸಿದೆ.
ಸೋಮವಾರ ಬೆಳಗ್ಗೆಯೇ ಕಾರ್ಯಾಚರಕ್ಕಿಳಿದ ಮಾರ್ಷಲ್ ಗಳು ಕೆ ಅರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸಿದ ಜನರಿಗೆ ದಂಡ ಹಾಕುವುದನ್ನು ಶುರು ಮಾಡಿದ್ದರು. ಮಾರ್ಷಲ್ ಗಳು ಅಲ್ಲಿರುವುದು ಗೊತ್ತಿದ್ದರೂ ಕೆಲ ಜನ ಉಡಾಫೆ ಮನೋಭಾವ ಪ್ರದರ್ಶಿಸಿ ಓಡಾಡುತ್ತಿರುವುದು ಕಾಣುತ್ತಿತ್ತು. ಕೆಲವರು ಮಾರ್ಷಲ್ಗಳ ಜೊತೆ ವಾದಕ್ಕಿಳಿದಿದ್ದರು. ಇನ್ನೂ ಕೆಲವರು ದಂಡದ ಹಣ ಪಾವತಿಸುವುದಿಲ್ಲ, ಎಲ್ಲಿಗೆ ಬೇಕಾದರೂ ಕರೆದ್ಯೊಯ್ಯಿರಿ ಅನ್ನುತ್ತಿದ್ದರು.
ಇಂಥ ಹಟಮಾರಿತನ, ಉಡಾಫೆ, ಬೇಜವಾಬ್ದಾರಿತನ ಬೇರೆಯವರಿಗೆ ಅಪಾಯ ತಂದೊಡುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಅವರಲ್ಲಿ ಇಲ್ಲ.
ಇದನ್ನೂ ಓದಿ: ಮೃತಪಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿಹಾಕಿ ಎಳೆದೊಯ್ದ ಐಆರ್‌ಬಿ ಟೋಲ್ ಸಿಬ್ಬಂದಿ; ಅಮಾನವೀಯ ವಿಡಿಯೋ ವೈರಲ್