‘ಇದು ಪುನೀತ್​ ದೊಡ್ಡತನವನ್ನು ತೋರಿಸುತ್ತದೆ’: ಅಪ್ಪು ಬಗ್ಗೆ ಶಿವಣ್ಣನ ಮಾತು

‘ಇದು ಪುನೀತ್​ ದೊಡ್ಡತನವನ್ನು ತೋರಿಸುತ್ತದೆ’: ಅಪ್ಪು ಬಗ್ಗೆ ಶಿವಣ್ಣನ ಮಾತು

TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 06, 2021 | 8:24 PM

ಗಂಧದ ಗುಡಿ’ ಟೈಟಲ್​​ ಟೀಸರ್​​ ನೋಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಪುನೀತ್​ ಅಣ್ಣ ಶಿವರಾಜ್​ಕುಮಾರ್​ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಅವರು ಅಪ್ಪು ಕಾರ್ಯವನ್ನು ಹೊಗಳಿದ್ದಾರೆ.

ಪುನೀತ್​ ರಾಜ್​ಕುಮಾರ್​ ನಿರ್ಮಾಣ ಮಾಡಿರುವ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟೈಟಲ್​ ಟೀಸರ್​ ಬಿಡುಗಡೆ ಆಗಿದೆ. ಪಿಆರ್​ಕೆ ಆಡಿಯೋ ಮೂಲಕ ರಿಲೀಸ್​ ಆಗಿರುವ ಈ ಟೀಸರ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೆಲೆಬ್ರಿಟಿಗಳು ಕೂಡ ಇದನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಲ್ಲರಿಂದಲೂ ಪ್ರಶಂಸೆಯ ಸುರಿಮಳೆ ಆಗುತ್ತಿದೆ. ಕರುನಾಡಿನ ಪ್ರಕೃತಿ ಸೌಂದರ್ಯವನ್ನು ಮನಮೋಹಕವಾಗಿ ಸೆರೆ ಹಿಡಿದಿರುವ ಈ ಡಾಕ್ಯುಮೆಂಟರಿ 2022ರಲ್ಲಿ ಥಿಯೇಟರ್​ನಲ್ಲಿ ಬಿಡುಗಡೆ ಆಗಲಿದೆ. ನಟ ಯಶ್​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ‘ಗಂಧದ ಗುಡಿ’ ಟೈಟಲ್​​ ಟೀಸರ್​​ ನೋಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಪುನೀತ್​ ಅಣ್ಣ ಶಿವರಾಜ್​ಕುಮಾರ್​ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಅವರು ಅಪ್ಪು ಕಾರ್ಯವನ್ನು ಹೊಗಳಿದ್ದಾರೆ.

ಇದನ್ನೂ ಓದಿ: ‘ಗಂಧದ ಗುಡಿ’ ನೋಡಿ ಸೆಲೆಬ್ರಿಟಿಗಳು ಫಿದಾ; ಪುನೀತ್​ ಕಾರ್ಯಕ್ಕೆ ಉಘೇ ಉಘೇ ಎಂದಿದ್ದು ಯಾರೆಲ್ಲ?

ಪುಷ್ಪ, ಆರ್​ಆರ್​ಆರ್​ ಮೀರಿಸಿ ಟ್ರೆಂಡ್​ ಆದ ‘ಗಂಧದ ಗುಡಿ’; ಪುನೀತ್​ ಡಾಕ್ಯುಮೆಂಟರಿಗೆ ಬಹುಪರಾಕ್​