ಒಂಟಿತನಕ್ಕೆ ಒಗ್ಗಿಕೊಳ್ಳುತ್ತಿರುವ ಹೆಚ್ ಡಿ ರೇವಣ್ಣ ಒಂಟಿಯಾಗಿಯೇ ಸದನದಿಂದ ಹೊರಬಂದರು!
ರೇವಣ್ಣರ ಮಕ್ಕಳಾದ ಪ್ರಜ್ವಲ್ ರೇವಣ್ಣ ಮತ್ತು ಡಾ ಸೂರಜ್ ರೇವಣ್ಣ ಇಬ್ಬರೂ ಲೈಂಗಿಕ ಅಪರಾಧಗಳ ಆರೋಪದಲ್ಲಿ ಜೈಲಿನಲ್ಲಿದ್ದಾರೆ. ರೇವಣ್ಣ ಮತ್ತು ಭವಾನಿ ಜಾಮೀನು ಪಡೆದು ಸೆರೆವಾಸ ತಪ್ಪಿಸಿಕೊಂಡಿದ್ದಾರೆ. ಮಕ್ಳಳ ವಿಚಾರಣೆ ಯಾವಾಗ ಶುರುವಾಗುತ್ತದೋ? ಅಷ್ಟಾಗಿಯೂ ರೇವಣ್ಣ ಧೃತಿಗೆಡದೆ ಇವತ್ತು ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ.
ಬೆಂಗಳೂರು: ಹೊಳೆನರಸೀಪುರದ ಶಾಸಕ ಹೆಚ್ ಡಿ ರೇವಣ್ಣರನ್ನು ಬೇರೆ ಕಾರಣಗಳಲ್ಲದಿದ್ದರೂ ಈ ಕಾರಣಕ್ಕೆ ಮೆಚ್ಚಲೇಬೇಕು ಮಾರಾಯ್ರೇ. ಅವರ ಸ್ಥಾನದಲ್ಲಿ ಬೇರೆ ಯಾರೇ ಆಗಿದ್ದರೂ ಇವತ್ತು ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗುತ್ತಿರಲಿಲ್ಲ.. ಆದರೆ, ತಮ್ಮ ಕೌಟುಂಬಿಕ ಬದುಕಿನಲ್ಲಿ ನಡೆದಿರುವ ಅಹಿತಕರ ಘಟನೆಗಳಿಂದ ಅವರು ಎದೆಗುಂದಿಲ್ಲ. ಅವರ ಪತ್ನಿ ಭವಾನಿ ರೇವಣ್ಣರ ವರ್ತನೆಯನ್ನು ನೋಡಿದ್ದೇವೆ. ಅವರು ಮಾಧ್ಯಮಗಳಿಗೆ ಮುಖ ಕೂಡ ತೋರಿಸುತ್ತಿಲ್ಲ. ಆದರೆ ರೇವಣ್ಣರಾದರೋ ಧೈರ್ಯವಾಗಿ ತಿರುಗಾಡುತ್ತಿದ್ದಾರೆ. ಆದರೆ, ತುಂಬಿದ ಸದನದಲ್ಲಿ ಅವರನ್ನು ಒಂಟಿತನ ಕಾಡಿರಬಹುದು. ಯಾಕೆಂದರೆ ಬೇರೆ ಸದಸ್ಯರು ಮಾತಾಡಿದರೂ ಕೇವಲ ಕಾಟಾಚಾರಕ್ಕೆ ಮಾತ್ರ. ಮಾತಾಡದಿದ್ದರೆ ಏನಾದರೂ ಅಂದುಕೊಂಡಾರು ಎಂಬ ಮನೋಭಾವದಿಂದ. ಇಲ್ನೋಡಿ, ಅವರು ಅಧಿವೇಶನದ ನಂತರ ಮನೆಗೆ ಹೋಗುತ್ತಿದ್ದಾರೆ. ಸದನದಿಂದ ಒಂಟಿಯಾಗೇ ಹೊರ ಬೀಳುತ್ತಾರೆ. ಅವರ ಬಲಭಾಗಲ್ಲಿ ಒಬ್ಬ ಯುವಕ ಕಾಣಿಸುತ್ತಾನೆ, ಪ್ರಾಯಶಃ ಅವರ ಡ್ರೈವರ್ ಇರಬಹುದು. ಡ್ರೈವರ್ ಮುಂದೆ ಓಡುತ್ತಾನೆ, ರೇವಣ್ಣ ಒಂಟಿಯಾಗಿ ಕಾಲೆಳೆದುಕೊಂಡು ಹೋಗುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಗನನ್ನು ನೋಡಲು ಜೈಲಿಗೆ ಬಂದ ಹೆಚ್ ಡಿ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!