ತಮಿಳುನಾಡುನಲ್ಲಿ ಪ್ರಬಲ ವಿರೋಧದ ಹೊರತಾಗಿಯೂ ಅಣ್ಣಾಮಲೈ ಹಿಂದೂತ್ವಕ್ಕಾಗಿ ಹೋರಾಡುತ್ತಿದ್ದಾರೆ: ಈಶ್ವರಪ್ಪ

|

Updated on: May 28, 2024 | 3:14 PM

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ರಾಮ-ಲಕ್ಷ್ಮಣರಂತೆ ಕೆಲಸ ಮಾಡುತ್ತಿದ್ದಾರೆ, ಅವರು ಯಾವಾಗ ಊಟ ಮಾಡುತ್ತಾರೋ ಯಾವಾಗ ನಿದ್ರೆ ಮಾಡುತ್ತಾರೋ ಭಗವಂತನೇ ಬಲ್ಲ, ದೇಶದ ಎಲ್ಲ ಸೈನಿಕರು ಅವರನ್ನು ನೆನಸಿಕೊಳ್ಳುತ್ತಾರೆ, ಅವರಿಬ್ಬರಿಲ್ಲದಿದ್ದರೆ ದೇಶದ ಸ್ಥಿತಿ ಏನಾಗುತಿತ್ತು ಅಂತ ಯೋಚನೆ ಮಾಡಿ ಎಂದು ಈಶ್ವರಪ್ಪ ಹೇಳಿದರು.

ಉಡುಪಿ: ವಿಧಾನ ಪರಿಷತ್ ಚುನಾವಣೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ (Raghupathi Bhat) ಪರ ಪ್ರಚಾರ ಮಾಡುತ್ತಿರುವ ಕೆಎಸ್ ಈಶ್ವರಪ್ಪ (KS Eshwarappa) ಇವತ್ತು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದರು. ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರ ಬಗ್ಗೆ ಮೆಚ್ಚುಗೆಯ ಮಾತಾಡಿದ ಅವರು ಪ್ರಬಲ ವಿರೋಧದ ಹೊರತಾಗಿಯೂ ಅವರು ತಮಿಳುನಾಡುನಲ್ಲಿ ಹಿಂದೂತ್ವಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅಪ್ಪ ಮಗನನ್ನು ಮತ್ತು ಮಗ ಅಪ್ಪನನ್ನು ಹೊಗಳುವ ಕೆಲಸ ನಡೆದಿದೆ. ಇದೇ ಕಾರಣಕ್ಕೆ ರಾಜ್ಯ ಬಿಜೆಪಿಯ ಶುದ್ಧೀಕರಣ ಆಗಬೇಕೆಂದು ತಾವು ಬಯಸಿದ್ದೇವೆ ಮತ್ತು ಕೇಂದ್ರದ ನಾಯಕರು ಇದನ್ನು ಗಮನಿಸಬೇಕು ಎಂದು ಈಶ್ವರಪ್ಪ ಹೇಳಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ರಾಮ-ಲಕ್ಷ್ಮಣರಂತೆ ಕೆಲಸ ಮಾಡುತ್ತಿದ್ದಾರೆ, ಅವರು ಯಾವಾಗ ಊಟ ಮಾಡುತ್ತಾರೋ ಯಾವಾಗ ನಿದ್ರೆ ಮಾಡುತ್ತಾರೋ ಭಗವಂತನೇ ಬಲ್ಲ, ದೇಶದ ಎಲ್ಲ ಸೈನಿಕರು ಅವರನ್ನು ನೆನಸಿಕೊಳ್ಳುತ್ತಾರೆ, ಅವರಿಬ್ಬರಿಲ್ಲದಿದ್ದರೆ ದೇಶದ ಸ್ಥಿತಿ ಏನಾಗುತಿತ್ತು ಅಂತ ಯೋಚನೆ ಮಾಡಿ ಎಂದು ಈಶ್ವರಪ್ಪ ಹೇಳಿದರು.

ಕರ್ನಾಟಕವೂ ಅದೇ ದಿಕ್ಕಿನಲ್ಲಿ ಸಾಗಬೇಕಿದೆ, ಆದರೆ ಇಲ್ಲಿ ನಡೆಯತ್ತಿರೋದೇ ಬೇರೆ, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅತಿಹೆಚ್ಚು ಸೀಟು ಸಿಕ್ಕರೆ ಅದಕ್ಕೆ ಬಿಎಸ್ ಯಡಿಯೂರಪ್ಪ ಕಾರಣ ಎಂದು ವಿಜಯೇಂದ್ರ ಹೇಳಿದ್ದಾರಂತೆ, ತಾವಂತೂ ಅದನ್ನು ಕೇಳಿಸಿಕೊಂಡಿಲ್ಲ, ಒಂದು ಪಕ್ಷ ಅವರು ಹೇಳಿದ್ದು ನಿಜವೇ ಆಗಿದ್ದರೆ ಆದರೆ ಅದಕ್ಕಿಂತ ದೊಡ್ಡ ಮುಟ್ಠಾಳತನದ ಹೇಳಿಕೆ ಮತ್ತೊಂದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಘವೇಂದ್ರನ ಕುತಂತ್ರ ರಾಜಕಾರಣಕ್ಕೆ ಮತದಾರ ಬಲಿಯಾಗಲ್ಲ, 2 ಲಕ್ಷ ವೋಟುಗಳಿಂದ ಗೆಲ್ಲುತ್ತೇನೆ: ಕೆಎಸ್ ಈಶ್ವರಪ್ಪ

Follow us on