Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಘವೇಂದ್ರನ ಕುತಂತ್ರ ರಾಜಕಾರಣಕ್ಕೆ ಮತದಾರ ಬಲಿಯಾಗಲ್ಲ, 2 ಲಕ್ಷ ವೋಟುಗಳಿಂದ ಗೆಲ್ಲುತ್ತೇನೆ: ಕೆಎಸ್ ಈಶ್ವರಪ್ಪ

ರಾಘವೇಂದ್ರನ ಕುತಂತ್ರ ರಾಜಕಾರಣಕ್ಕೆ ಮತದಾರ ಬಲಿಯಾಗಲ್ಲ, 2 ಲಕ್ಷ ವೋಟುಗಳಿಂದ ಗೆಲ್ಲುತ್ತೇನೆ: ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: May 07, 2024 | 11:25 AM

ಸೋಲು ಖಚಿತ ಅಂತ ಗೊತ್ತಾಗಿ ರಾಘವೇಂದ್ರ, ಈಶ್ವರಪ್ಪನವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಅಂತ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಜನರ ಮುಂದೆ ಇಂಥ ಷಡ್ಯಂತ್ರಗಳೆಲ್ಲ ನಡೆಯಲ್ಲ, ಜನರಿಗೆ ಮನಸ್ಸಲ್ಲಿ ತನ್ನ ಚಿಹ್ನೆ ಅಚ್ಚು ಹಾಕಿದೆ ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ನಗರದ ಮತಗಟ್ಟಯೊಂದರಲ್ಲಿ ಕುಟುಂಬದೊಂದಿಗೆ ಮತ ಚಲಾಯಿಸಿದ ಬಳಿಕ ಟಿವಿ9 ಶಿವಮೊಗ್ಗ ಪ್ರತಿನಿಧಿಯೊಂದಿಗೆ ಮಾತಾಡಿದ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಬೆಂಬಲ ತನಗಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಸಹ ತಾನೇ ಸೂಕ್ತ ವ್ಯಕ್ತಿ ಅಂತ ಪರಿಗಣಿಸಿದ್ದು, ಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿ ನರೇಂದ್ರ ಮೋದಿಯವರ (PM Narendra Modi) ಪರ ಕೈ ಎತ್ತುತ್ತೇನೆ ಎಂದು ಹೇಳಿದರು. ಎಲ್ಲರ ಕುತೂಹಲ ಶಿವಮೊಗ್ಗ ಕ್ಷೇತ್ರದ ಮೇಲಿರುವುದು ಸತ್ಯ ಮತ್ತು ತಾನು ಗೆಲ್ಲುತ್ತೇನೆ ಎಂಬ ನಿರೀಕ್ಷೆಯೂ ಅವರಲ್ಲಿದೆ ಎಂದು ಈಶ್ವರಪ್ಪ ಹೇಳಿದರು. ಸೋಲು ಖಚಿತ ಅಂತ ಗೊತ್ತಾಗಿ ರಾಘವೇಂದ್ರ, (BY Raghavendra) ಈಶ್ವರಪ್ಪನವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಅಂತ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಜನರ ಮುಂದೆ ಇಂಥ ಷಡ್ಯಂತ್ರಗಳೆಲ್ಲ ನಡೆಯಲ್ಲ, ಜನರಿಗೆ ಮನಸ್ಸಲ್ಲಿ ತನ್ನ ಚಿಹ್ನೆ ಅಚ್ಚು ಹಾಕಿದೆ ಎಂದು ಈಶ್ವರಪ್ಪ ಹೇಳಿದರು. ಯಡಿಯೂರಪ್ಪ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡು ಗೀತಾ ಶಿವರಾಜ್ ಕುಮಾರ್ ಅವರನ್ನು ಹಾಕಿಸಿಕೊಂಡಿದ್ದಾರೆ, ಅವರೊಬ್ಬ ದುರ್ಬಲ ಅಭ್ಯರ್ಥಿ ಎಂದ ಈಶ್ವರಪ್ಪ, ಮತದಾರರಿಗೆ ರಾಘವೇಂದ್ರ ಮತ ಚಲಾಯಿಸಲು ಮನಸ್ಸಿಲ್ಲ ಹಾಗಾಗಿ ತಾನೇ ಗೆಲ್ಲೋದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣನ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ, ಜನ ಅವನ ಮುಖಕ್ಕೆ ಉಗಿಯುತ್ತಿದ್ದಾರೆ: ಈಶ್ವರಪ್ಪ