AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಬಾರಿಗೆ ಫ್ಲೈಟ್ ಏರಿದ ಸರ್ಕಾರಿ ಶಾಲಾ ಮಕ್ಕಳು!

ಮೊದಲ ಬಾರಿಗೆ ಫ್ಲೈಟ್ ಏರಿದ ಸರ್ಕಾರಿ ಶಾಲಾ ಮಕ್ಕಳು!

ನವೀನ್ ಕುಮಾರ್ ಟಿ.
| Edited By: |

Updated on: Sep 05, 2026 | 1:36 PM

Share

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಮಲ್ಲೇಪುರ ಸರ್ಕಾರಿ ಶಾಲೆ ಹಾಗೂ ಅನಾಥಾಶ್ರಮದ 200ಕ್ಕೂ ಹೆಚ್ಚು ಮಕ್ಕಳು ಮೊದಲ ಬಾರಿಗೆ ವಿಮಾನವೇರಿ ಮುಂಬೈಗೆ ಪ್ರವಾಸ ಬೆಳೆಸಿದ್ದಾರೆ. ಉದ್ಯಮಿ ಎಂ.ಪಿ. ಗಿರೀಶ್ ತಮ್ಮ ವೈಯಕ್ತಿಕ ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ತಿಳಿಸುವ ಉದ್ದೇಶದಿಂದ ಈ ಪ್ರವಾಸ ಆಯೋಜಿಸಿದ್ದು, ಮಕ್ಕಳು ಮತ್ತು ಶಿಕ್ಷಕರು ಚೈತ್ಯಭೂಮಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸಲಿದ್ದಾರೆ.

ದೇವನಹಳ್ಳಿ, ಸೆಪ್ಟೆಂಬರ್ 05: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮಲ್ಲೇಪುರ ಸರ್ಕಾರಿ ಶಾಲೆ ಹಾಗೂ ಅನಾಥಾಶ್ರಮದ 200ಕ್ಕೂ ಹೆಚ್ಚು ಮಕ್ಕಳಿಗೆ ಉದ್ಯಮಿ ಎಂ.ಪಿ. ಗಿರೀಶ್ ವೈಯಕ್ತಿಕ ವೆಚ್ಚದಲ್ಲಿ ವಿಮಾನದ ಮೂಲಕ ಮುಂಬೈ ಪ್ರವಾಸ ಆಯೋಜಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದ ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ಮೊದಲ ಬಾರಿಗೆ ಫ್ಲೈಟ್ ಹತ್ತಿ ಹರ್ಷ ವ್ಯಕ್ತಪಡಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಅರಿವು ಮೂಡಿಸಲು ಈ ಎರಡು ದಿನಗಳ ಟೂರ್ ಹಮ್ಮಿಕೊಳ್ಳಲಾಗಿದೆ. ಪ್ರವಾಸದಲ್ಲಿ ಚೈತ್ಯಭೂಮಿ, ಅಂಬೇಡ್ಕರ್ ನಿವಾಸ ಸೇರಿದಂತೆ ಮುಂಬೈನ ಹಲವು ಪ್ರಸಿದ್ಧ ಸ್ಥಳಗಳನ್ನು ವೀಕ್ಷಿಸಲಿದ್ದು, ವಸತಿ ಹಾಗೂ ಊಟದ ಸಂಪೂರ್ಣ ವೆಚ್ಚವನ್ನು ಎಂ.ಪಿ. ಗಿರೀಶ್ ಅವರೇ ಭರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us