ದೇವರಾಜೇಗೌಡ ತತ್ವ ಸಿದ್ಧಾಂತವಿಲ್ಲದ ವ್ಯಕ್ತಿ, ಒಮ್ಮೆ ತಾನು ರಾಜಕಾರಣಿ ಅಂತಾರೆ ಮತ್ತೊಮ್ಮೆ ವಕೀಲ: ಶ್ರೇಯಸ್ ಪಟೇಲ್
ಕಾರ್ತೀಕ್ ನನ್ನ ಸಂಪರ್ಕದಲ್ಲಿದ್ದಾರೆ ಮತ್ತು ಸಂತ್ರಸ್ತೆಯರ ನನಗೆ ಫೋನ್ ಮಾಡಿ ಸಹಾಯ ಯಾಚಿಸಿದ್ದಾರೆ ಅಂತ ದೇವರಾಜೇಗೌಡರು ಹೇಳಿದ್ದೆಲ್ಲ ಸುಳ್ಳು, ತನಿಖೆ ನಡೆಯುತ್ತಿಯಲ್ಲ? ಎಲ್ಲ ಹೊರ ಬರುತ್ತೆ ಎಂದು ಅವರು ಹೇಳಿದರು. ದೇವರಾಜೇಗೌಡ ಒಬ್ಬ ತತ್ವಸಿದ್ಧಾಂತ ಇಲ್ಲದ ಮನುಷ್ಯ, ತಾನೊಬ್ಬ ರಾಜಕಾರಣಿ ಅಂತ ಒಮ್ಮೆ ಹೇಳಿದರೆ ಮತ್ತೊಮ್ಮೆ ವಕೀಲ ಅನ್ನುತ್ತಾರೆ ಎಂದು ಶ್ರೇಯಸ್ ಪಟೇಲ್ ಹೇಳಿದರು.
ಹಾಸನ: ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel) ನಿನ್ನೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ವಕೀಲ ದೇವರಾಜೇಗೌಡ (Devarajegowda) ಅವರು ತನ್ನ ವಿರುದ್ಧ ಮಾಡಿದ ಅಪಾದನೆಗಳು ಹುರುಳಿಲ್ಲದವು ಎಂದು ಹೇಳಿದರು. ಯಾವುದೋ ಒಂದು ಆಸ್ತಿ ಪ್ರಕರಣದಲ್ಲಿ ತನಗೆ ಅವರ ಪರಿಚಯವಾಗಿದ್ದು, ಅವರೊಂದಿಗೆ ನಾನ್ಯಾವತ್ತೂ ಸಂಪರ್ಕದಲ್ಲಿರಲಿಲ್ಲ, ಅವರ ಫೋನ್ ನಂಬರ್ ಸಹ ತನ್ನ ಬಳಿ ಸೇವ್ಡ್ ಆಗಿಲ್ಲ ಎಂದು ಪಟೇಲ್ ಹೇಳಿದರು. ಪ್ರಜ್ವಲ್ ರೇವಣ್ಣ ಡ್ರೈವರ್ ಕಾರ್ತೀಕ್ (driver Karthik) ತನ್ನನ್ನು ಭೇಟಿಯಾಗಿದ್ದು ನಿಜ, ಅದರೆ ಅದು ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಒಂದು ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ತನ್ನನ್ನು ಸಂಪರ್ಕಿಸಿದ್ದರು ಎಂದು ಪಟೇಲ್ ಹೇಳಿದರು. ಕಾರ್ತೀಕ್ ನನ್ನ ಸಂಪರ್ಕದಲ್ಲಿದ್ದಾರೆ ಮತ್ತು ಸಂತ್ರಸ್ತೆಯರ ನನಗೆ ಫೋನ್ ಮಾಡಿ ಸಹಾಯ ಯಾಚಿಸಿದ್ದಾರೆ ಅಂತ ದೇವರಾಜೇಗೌಡರು ಹೇಳಿದ್ದೆಲ್ಲ ಸುಳ್ಳು, ತನಿಖೆ ನಡೆಯುತ್ತಿಯಲ್ಲ? ಎಲ್ಲ ಹೊರ ಬರುತ್ತೆ ಎಂದು ಅವರು ಹೇಳಿದರು. ದೇವರಾಜೇಗೌಡ ಒಬ್ಬ ತತ್ವಸಿದ್ಧಾಂತ ಇಲ್ಲದ ಮನುಷ್ಯ, ತಾನೊಬ್ಬ ರಾಜಕಾರಣಿ ಅಂತ ಒಮ್ಮೆ ಹೇಳಿದರೆ ಮತ್ತೊಮ್ಮೆ ವಕೀಲ ಅನ್ನುತ್ತಾರೆ ಎಂದು ಶ್ರೇಯಸ್ ಪಟೇಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಬೇಕಾದರೆ ಶ್ರೇಯಸ್ ಪಟೇಲ್ರನ್ನು ಗೆಲ್ಲಿಸಬೇಕು: ಕೆಎಂ ಶಿವಲಿಂಗೇಗೌಡ