ಪರಪ್ಪನ ಅಗ್ರಹಾರ ಜೈಲು ಪರಿಶೀಲಿಸಿದ ಡಿಜೆಪಿ: ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್

Edited By:

Updated on: Aug 14, 2026 | 5:37 PM

ಸಿಸಿಬಿ ದಾಳಿ ವೇಳೆ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಸೆಲ್​​​​ನಲ್ಲಿ ಮೊಬೈಲ್, ಪೆನ್​​​ಡ್ರೈವ್ ಸಿಕ್ಕಿದ್ದು, ಇದು ಭಾರೀ ಸಂಚಲನ ಮೂಡಿಸಿದೆ. ಪ್ರಜ್ವಲ್​​ಗೆ ಮೊಬೈಲ್ ಕೊಟ್ಟಿದ್ಯಾರು? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿದ್ದು, ಸಂಬಂಧ ತನಿಖೆ ನಡೆಯುತ್ತಿದೆ. ಇದರ ಮಧ್ಯೆ ಇಂದು (ಆಗಸ್ಟ್ 14) ಕಾರಾಗೃಹ ಮತ್ತು ಸುಧಾರಣೆ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜೈಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪ್ರಜ್ವಲ್ ಬ್ಯಾರಕ್​ನಲ್ಲಿ ನಿಷೇಧಿತ ವಸ್ತು ಹೇಗೆ ಪತ್ತೆ ಆಯ್ತು? ಮೊಬೈಲ್, ಸಿಮ್, ಚಾರ್ಜರ್, ಪೆನ್​ಡ್ರೈವ್ ಹೇಗೆ ಹೋಯ್ತು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಅಕ್ರಮಗಳ ಕಡಿವಾಣಕ್ಕೆ ಬ್ರೇಕ್ ಹಾಕುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಬೆಂಗಳೂರು, (ಆಗಸ್ಟ್ 14): ಸಿಸಿಬಿ ದಾಳಿ ವೇಳೆ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಸೆಲ್​​​​ನಲ್ಲಿ ಮೊಬೈಲ್, ಪೆನ್​​​ಡ್ರೈವ್ ಸಿಕ್ಕಿದ್ದು, ಇದು ಭಾರೀ ಸಂಚಲನ ಮೂಡಿಸಿದೆ. ಪ್ರಜ್ವಲ್​​ಗೆ ಮೊಬೈಲ್ ಕೊಟ್ಟಿದ್ಯಾರು? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿದ್ದು, ಸಂಬಂಧ ತನಿಖೆ ನಡೆಯುತ್ತಿದೆ. ಇದರ ಮಧ್ಯೆ ಇಂದು (ಆಗಸ್ಟ್ 14) ಕಾರಾಗೃಹ ಮತ್ತು ಸುಧಾರಣೆ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜೈಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪ್ರಜ್ವಲ್ ಬ್ಯಾರಕ್​ನಲ್ಲಿ ನಿಷೇಧಿತ ವಸ್ತು ಹೇಗೆ ಪತ್ತೆ ಆಯ್ತು? ಮೊಬೈಲ್, ಸಿಮ್, ಚಾರ್ಜರ್, ಪೆನ್​ಡ್ರೈವ್ ಹೇಗೆ ಹೋಯ್ತು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಅಕ್ರಮಗಳ ಕಡಿವಾಣಕ್ಕೆ ಬ್ರೇಕ್ ಹಾಕುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ಜೈಲಿನಲ್ಲಿ ಮೊಬೈಲ್ ಪತ್ತೆಯಾದ ಬಗ್ಗೆ ಸಿಸಿಬಿ ತನಿಖೆ ಮಾಡುತ್ತಿದೆ. ನಾವು ಬಹಳ ದಿನಗಳಿಂದ ಕಾರಾಗೃಹಕ್ಕೆ ಭೇಟಿ ನೀಡಿರಲಿಲ್ಲ.ಈಗ ಜನರಲ್ ವಿಸಿಟ್ ಮಾಡಿದ್ದೇವೆ. ವಿಚಾರಣೆ ನಡೀತಿದೆ ಮುಗಿದ ನಂತರ ತಿಳಿಸುತ್ತೇವೆ. ಜೈಲಿನಲ್ಲಿ ಪ್ರಜ್ವಲ್​ ಮೊಬೈಲ್​ನಲ್ಲಿ ಮಾತನಾಡ್ತಿದ್ದ ವಿಡಿಯೋ ವೈರಲ್ ಆಗಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.ಈ ಬಗ್ಗೆ ನಾವು ತನಿಖೆ ಮಾಡುತ್ತಿಲ್ಲ. ನಾನು ಕೇವಲ ಜನರಲ್ ವಿಸಿಟ್​ಗೆ ಬಂದಿದ್ದೆ. ಬೇರೆ ಬೇರೆ ಬ್ಯಾರಕ್​ಗಳಲ್ಲಿ ಏನು ಸಮಸ್ಯೆ ಎಂದು ಪರಿಶೀಲನೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us