ಮುಂಬೈನಲ್ಲಿ ‘ಮಾರ್ಟಿನ್’ ಟ್ರೇಲರ್ ಲಾಂಚ್; ಇದು ಸಾಮಾನ್ಯ ಕಾರ್ಯಕ್ರಮ ಅಲ್ಲ

ಮುಂಬೈನಲ್ಲಿ ‘ಮಾರ್ಟಿನ್’ ಟ್ರೇಲರ್ ಲಾಂಚ್; ಇದು ಸಾಮಾನ್ಯ ಕಾರ್ಯಕ್ರಮ ಅಲ್ಲ

ರಾಜೇಶ್ ದುಗ್ಗುಮನೆ
|

Updated on: Aug 01, 2024 | 8:08 AM

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ತಂಡದವರು ಮುಂಬೈನಲ್ಲಿ ಅದ್ದೂರಿಯಾಗಿ ಈವೆಂಟ್ ನಡೆಸುತ್ತಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಮಾಹಿತಿ ನೀಡಿದ್ದಾರೆ. ಇದು ಭಾರತದ ಮೊದಲ ಅಂತಾರಾಷ್ಟ್ರೀಯ ಸುದ್ದಿಗೋಷ್ಠಿ ಅನ್ನೋದು ವಿಶೇಷ.

ಸಾಮಾನ್ಯವಾಗಿ ಕನ್ನಡ ಸಿನಿಮಾಗಳ  ಟ್ರೇಲರ್ ಲಾಂಚ್ ಈವೆಂಟ್ ಬೆಂಗಳೂರಿನಲ್ಲಿ ನಡೆಯುತ್ತವೆ. ಆದರೆ, ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ತಂಡದವರು ಮುಂಬೈನಲ್ಲಿ ಅದ್ದೂರಿಯಾಗಿ ಈವೆಂಟ್ ನಡೆಸುತ್ತಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಮಾಹಿತಿ ನೀಡಿದ್ದಾರೆ. ‘ಆಗಸ್ಟ್ 5ರಂದು ಮುಂಬೈನಲ್ಲಿ ಸಂಜೆ 5 ಗಂಟೆ 55 ನಿಮಿಷಕ್ಕೆ ಟ್ರೇಲರ್ ಲಾಂಚ್ ಆಗುತ್ತದೆ. ಇದು ಅಂತಾರಾಷ್ಟ್ರೀಯ ಪ್ರೆಸ್​ಮೀಟ್. ಭಾರತದ ಮೊದಲ ಅಂತಾರಾಷ್ಟ್ರೀಯ ಸುದ್ದಿಗೋಷ್ಠಿ. ಈ ಸುದ್ದಿಗೋಷ್ಠಿಗೆ ಜಪಾನ್, ಈಜಿಪ್ಟ್, ದುಬೈ, ರಷ್ಯಾ, ಹಾಂಗ್​ಕಾಂಗ್, ಇಂಡೋನೇಷ್ಯಾ, ಬಾಂಗ್ಲಾದೇಶ ಸೇರಿ ಅನೇಕ ದೇಶಗಳ ರಿಪೋರ್ಟ್​ಗಳು ಬರುತ್ತಿದ್ದಾರೆ’ ಎಂದು ಧ್ರುವ ಸರ್ಜಾ ಮಾಹಿತಿ ನೀಡಿದ್ದಾರೆ,.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.