‘ಕೆಡಿ’ ಸಿನಿಮಾ ಎಷ್ಟು ದಿನ ಓಡುತ್ತೆ? ತಮ್ಮದೇ ಲೆಕ್ಕಾಚಾರ ತಿಳಿಸಿದ ನಿರ್ದೇಶಕ ಪ್ರೇಮ್​

|

Updated on: May 26, 2024 | 11:14 PM

‘ಎಷ್ಟು ದಿನ ಸಿನಿಮಾ ಓಡುತ್ತೆ ಎಂಬುದು ಮುಖ್ಯವಲ್ಲ. ಎಷ್ಟು ಕಲೆಕ್ಷನ್​ ಮಾಡಿತು ಎಂಬುದು ಮಾತ್ರ ನನಗೆ ಮುಖ್ಯ. ‘ಕೆಡಿ’ ಸಿನಿಮಾವನ್ನು 400 ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದರೆ ಹಾಕಿದ ಬಂಡವಾಳ ವಾಪಸ್​ ಬರಲ್ಲ. ದೇಶಾದ್ಯಂತ ಬಿಡುಗಡೆ ಮಾಡಿದರೆ ಮೂರೇ ದಿನದಲ್ಲಿ ದುಡ್ಡು ಬರುತ್ತದೆ’ ಎಂದು ನಿರ್ದೇಶಕ ಪ್ರೇಮ್​ ಹೇಳಿದ್ದಾರೆ. ‘ಕೆಡಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ನಟ ಧ್ರುವ ಸರ್ಜಾ (Dhruva Sarja) ಅಭಿನಯದ ‘ಕೆಡಿ’ ಸಿನಿಮಾ (KD Movie) ಈ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದೆ. ಡಿಸೆಂಬರ್​ನಲ್ಲಿ ಈ ಸಿನಿಮಾ ರಿಲೀಸ್​ ಆಗುತ್ತೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಹಾಗಾದರೆ ಈ ಚಿತ್ರ ಎಷ್ಟು ದಿನ ಓಡಬಹುದು ಎಂಬ ಕುತೂಹಲ ಕೆಲವರಲ್ಲಿ ಇದೆ. ಅದಕ್ಕೆ ನಿರ್ದೇಶಕ ಪ್ರೇಮ್​ (Director Prem) ಉತ್ತರ ನೀಡಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಎಷ್ಟು ದಿನ ಎಂಬುದು ಮುಖ್ಯ ಅಲ್ಲ ಎಂದು ಅವರು ಹೇಳಿದ್ದಾರೆ. ‘ಮೊದಲು ನನ್ನನ್ನು ಹುಚ್ಚ ಎಂದಿದ್ದರು ಜನ. ಯಾಕೆಂದರೆ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವುದನ್ನು ನಾನು ‘ರಾಜ್​: ದಿ ಶೋ ಮ್ಯಾನ್’ ಚಿತ್ರದಿಂದ ಶುರು ಮಾಡಿಕೊಂಡೆ. ಮಾರ್ಕೆಟಿಂಗ್​ಹೇಗೆ ಎಂದರೆ ಒಂದೇ ಬಾರಿಗೆ ಜನ ಬಂದು ನೋಡಬೇಕು. ಮೊದಲು 100 ಚಿತ್ರಮಂದಿರದಲ್ಲಿ ಹಾಕಿ ಆಮೇಲೆ ಹಿಟ್​ ಆದರೆ ಜನ ಬರುತ್ತಾರೆ ಅನ್ನೋದೆಲ್ಲ ಸುಳ್ಳು. ಯಾಕೆಂದರೆ ಮಾರನೇ ದಿನ ಪ್ರೇಕ್ಷಕರಿಗೆ ಇನ್ನೊಂದು ಸಿನಿಮಾ ಸಿಕ್ಕಿರುತ್ತದೆ. ಸಿನಿಮಾ ಕ್ರೇಜ್​ ಇದ್ದರೆ ಒಂದು ವಾರದಲ್ಲೇ ಹೌಸ್​ಫುಲ್​ ಆಗತ್ತೆ. ಜಾಸ್ತಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ 100 ದಿನದಲ್ಲಿ ಬರುವ ದುಡ್ಡು 3 ದಿನದಲ್ಲಿ ಬರುತ್ತದೆ. ಇದನ್ನು ಶುರು ಮಾಡಿದ್ದೇ ನಾನು, ಬೈಯ್ಯಿಸಿಕೊಂಡವನು ಕೂಡ ನಾನು. ‘ಜೋಗಯ್ಯ’ ಸಿನಿಮಾವನ್ನು ಕೂಡ ಹಾಗೇ ಮಾಡಿದೆ. ಅದರಿಂದ ನನಗೆ ಲಾಭ ಆಯಿತು’ ಎಂದು ಪ್ರೇಮ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.