Padavi Poorva: ಧ್ರುವ ಸರ್ಜಾಗೆ ಪಿಯುಸಿ ದಿನಗಳನ್ನು ನೆನಪಿಸಿದ ‘ಪದವಿ ಪೂರ್ವ’ ಸಿನಿಮಾ ಹಾಡು

Padavi Poorva: ಧ್ರುವ ಸರ್ಜಾಗೆ ಪಿಯುಸಿ ದಿನಗಳನ್ನು ನೆನಪಿಸಿದ ‘ಪದವಿ ಪೂರ್ವ’ ಸಿನಿಮಾ ಹಾಡು

TV9 Web
| Updated By: ಮದನ್​ ಕುಮಾರ್​

Updated on:Dec 18, 2022 | 3:37 PM

Baaro Picturegogona Song: ‘ಪದವಿ ಪೂರ್ವ’ ಸಿನಿಮಾದ ಹೊಸ ಸಾಂಗ್​ ರಿಲೀಸ್​ ಆಗಿದೆ. ಯೂಥ್​ಪುಲ್​ ಆಗಿರುವ ಈ ಸಾಂಗ್​ ನೋಡಿದ ಬಳಿಕ ಧ್ರುವ ಸರ್ಜಾ ಅವರಿಗೆ ತಮ್ಮ ಕಾಲೇಜು ದಿನಗಳು ನೆನಪಾಗಿವೆ.

ಪೃಥ್ವಿ ಶ್ಯಾಮನೂರು ನಟನೆಯ ‘ಪದವಿ ಪೂರ್ವ’ (Padavi Poorva Movie) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಟೀಸರ್​ ಮೂಲಕ ಈಗಾಗಲೇ ಗಮನ ಸೆಳೆದ ಈ ಚಿತ್ರತಂಡ ಈಗ ಹೊಸ ಸಾಂಗ್​ ರಿಲೀಸ್​ ಮಾಡಿದೆ. ‘ಬಾರೊ ಪಿಚ್ಚರ್​ಗೋಗೋಣ..’ (Baaro Picturegogona Song) ಎಂದು ಶುರುವಾಗುವ ಈ ಗೀತೆಗೆ ಯೋಗರಾಜ್​ ಭಟ್​ ಸಾಹಿತ್ಯ ಬರೆದಿದ್ದಾರೆ. ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಹಾಡಿಗೆ ಧ್ವನಿ ನೀಡಿದ್ದಾರೆ ಅರ್ಜುನ್​ ಜನ್ಯ. ಈ ಹಾಡಿನ ಬಗ್ಗೆ ನಟ ಧ್ರುವ ಸರ್ಜಾ (Dhruva Sarja) ಅವರು ಮಾತನಾಡಿದ್ದಾರೆ. ಯೂಥ್​ಪುಲ್​ ಆಗಿರುವ ಈ ಸಾಂಗ್​ ನೋಡಿದ ಬಳಿಕ ಧ್ರುವ ಅವರಿಗೆ ತಮ್ಮ ಕಾಲೇಜು ದಿನಗಳು ನೆನಪಾಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Dec 18, 2022 03:37 PM