AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?

ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?

ರಾಜೇಶ್ ದುಗ್ಗುಮನೆ
|

Updated on: Oct 15, 2026 | 9:03 AM

Share

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಪವರ್ ಕಾಯಿನ್ ಹಂಚಿಕೆಯ ಟಾಸ್ಕ್ ವೇಳೆ ಗಾನವಿ ಅವರು ತಮ್ಮದೇ ತಂಡದವರೊಂದಿಗೆ ಒಳಮಸಲತ್ತು ನಡೆಸಿ ಮೋಸ ಮಾಡಿದ್ದಾರೆ. ತಮಗೆ ತಾವೇ ಹೆಚ್ಚಿನ ಕಾಯಿನ್‌ಗಳನ್ನು ಗಿಟ್ಟಿಸಿಕೊಳ್ಳಲು ಅವರು ಮಾಡಿದ ತಂತ್ರವೀಗ ಮನೆಯಲ್ಲಿ ಬಿರುಗಾಳಿ ಎಬ್ಬಿಸಿದೆ. ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಪ್ರಸ್ತುತ ರೋಚಕ ಬೆಳವಣಿಗೆಯೊಂದು ನಡೆದಿದ್ದು, ಪವರ್ ಕಾಯಿನ್‌ಗಳ ಹಂಚಿಕೆಯ ವಿಚಾರದಲ್ಲಿ ಸ್ಪರ್ಧಿ ಗಾನವಿ ಅವರು ತಮ್ಮ ತಂಡಕ್ಕೆ ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತಂತೆ ಪ್ರೊಮೋವೊಂದು ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಮನೆಯಲ್ಲಿ 30 ಪವರ್ ಕಾಯಿನ್‌ಗಳನ್ನು ಗಳಿಸಿರುವ ಒಂಟಿ ಪಂಟರ್ಸ್ ತಂಡವು, ಆ ಕಾಯಿನ್‌ಗಳನ್ನು ಪರಸ್ಪರ ಹಂಚಿಕೊಳ್ಳುವ ಸವಾಲು ಎದುರಿಸಿದೆ. ಬಹುಮತದ ಮೂಲಕ ಒಬ್ಬರನ್ನು ಆಯ್ಕೆ ಮಾಡಿ ಕನ್ಫೆಷನ್ ರೂಮ್‌ಗೆ ಕಳುಹಿಸಬೇಕಿದ್ದ ಈ ಸಂದರ್ಭದಲ್ಲಿ, ಗಾನವಿ ಅವರು ತಮ್ಮದೇ ತಂಡದ ಸದಸ್ಯರೊಂದಿಗೆ ಒಳಮಸಲತ್ತು ನಡೆಸಿದ್ದಾರೆ. ಎಲ್ಕರಿಗೂ ಸರಿಯಾಗಿ ಹಂಚೋದಾಗಿ ಹೇಳಿ ಕನ್ಫೆಷನ್ ರೂಮ್‌ಗೆ ಹೋದ ಅವರು ಸ್ವಾರ್ಥದ ಆಟವಾಡಿದ್ದಾರೆ.

ತಂಡದ ಒಟ್ಟಾರೆ ಪ್ರಯತ್ನದ ಫಲವಾಗಿ ಬಂದ ಕಾಯಿನ್‌ಗಳನ್ನು ಎಲ್ಲರಿಗೂ ಸಮಾನವಾಗಿ ಹಂಚುವ ಬದಲು, ತನಗೆ ತಾನೇ ಹೆಚ್ಚಿನ ಅಂದರೆ 15 ಪವರ್ ಕಾಯಿನ್‌ಗಳನ್ನು ಪಡೆದುಕೊಳ್ಳಲು ಗಾನವಿ ಮುಂದಾಗಿದ್ದಾರೆ. ಈ ಗುಪ್ತ ತಂತ್ರ ಹಾಗೂ ಸ್ವಾರ್ಥದ ನಿರ್ಧಾರವು ತಂಡದ ಇತರ ಸದಸ್ಯರಲ್ಲಿ ಆಕ್ರೋಶ ಮೂಡಿಸಬಹುದು. ಈ ಬಗ್ಗೆ ಸ್ಪಷ್ಟತೆ ಇನ್ನಷ್ಟೇ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More