ಮೆಟ್ರೋ ದರ ಏರಿಕೆಗೆ ರಾಜ್ಯ ಬರೆದ ಪತ್ರಕ್ಕೆ ಕೇಂದ್ರ ಅನುಮತಿ ಕೊಟ್ಟಿತ್ತಾ? ರಹಸ್ಯ ಬಹಿರಂಗಪಡಿಸಿದ ಶೋಭಾ ಕರಂದ್ಲಾಜೆ
ನಮ್ಮ ಮೆಟ್ರೋ ದರ ಏರಿಕೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬರೆದ ಪತ್ರಕ್ಕೆ ಕೇಂದ್ರ ಅನುಮತಿ ಕೊಟ್ಟಿತ್ತಾ? ರಾಜ್ಯ ಸರ್ಕಾರ ಬರೆದ ಪತ್ರ ಏನು? ರಾಜ್ಯದ ಅಧಿಕಾರಿಗಳು ಬರೆದ ಪತ್ರಕ್ಕೆ ಕೇಂದ್ರ ಏನು ಹೇಳಿತ್ತು? ಎಷ್ಟು ದರ ಹೆಚ್ಚಳ ಮಾಡಬೇಕೆಂದು ನಿರ್ಧರಿಸಿದ್ದು ಯಾರು? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹಿರಂಗಪಡಿಸಿದ ರಹಸ್ಯ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 19: ಮೆಟ್ರೋ ದರ ಏರಿಕೆ ವಿಚಾರದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು. ದೆಹಲಿಯಲ್ಲಿ ಮಾತನಾಡಿದ ಅವರು, ಮೆಟ್ರೋ ದರ ಏರಿಕೆ ಸಂಬಂಧ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಧಿಕಾರಿಗಳು ಕೇಂದ್ರಕ್ಕೆ ಪತ್ರ ಬರೆದ್ದರು. ಹಲವು ಬಾರಿ ಒತ್ತಡ ಹೇರಲಾಗಿತ್ತು ಎಂದು ದಾಖಲೆ ಪ್ರದರ್ಶಿಸಿದರು. ರಾಜ್ಯದ ನಿರಂತರದ ಒತ್ತಡದ ಬಳಿಕ ಕೇಂದ್ರ ಅನುಮತಿ ನೀಡಿದ್ದು ನಿಜ. ಆದರೆ ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಿಸಬೇಕೆಂಬುದನ್ನು ರಾಜ್ಯವೇ ತೀರ್ಮಾನಿಸಿದೆ ಎಂದು ಅವರು ಹೇಳಿದರು. ಜತೆಗೆ, ಇನ್ನಷ್ಟು ರಹಸ್ಯಗಳನ್ನು ಅವರು ಬಹಿರಂಗಪಡಿಸಿದರು. ವಿವರಗಳಿಗೆ ವಿಡಿಯೋ ನೋಡಿ.