Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಜಲು ಹೋಗಿದ್ದ ವೈದ್ಯೆ ನೀರುಪಾಲು.. 20 ಅಡಿ ಎತ್ತರದಿಂದ ಜಿಗಿದ ಭಯಾನಕ ದೃಶ್ಯ!

ಈಜಲು ಹೋಗಿದ್ದ ವೈದ್ಯೆ ನೀರುಪಾಲು.. 20 ಅಡಿ ಎತ್ತರದಿಂದ ಜಿಗಿದ ಭಯಾನಕ ದೃಶ್ಯ!

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ರಮೇಶ್ ಬಿ. ಜವಳಗೇರಾ

Updated on:Feb 19, 2025 | 2:28 PM

ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಹೈದರಬಾದ್ ಮೂಲದ ವೈದ್ಯೆ ನೀರು ಪಾಲಾಗಿದ್ದಾರೆ. ಸ್ನೇಹಿತ ಜತೆ ಪ್ರವಾಸಕ್ಕೆ ಬಂದಿದ್ದ ಹೈದರಬಾದ್ ಮೂಲದ ಅನನ್ಯರಾವ್ ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಬಳಿಯ ತುಂಗಭದ್ರಾ ನದಿಗೆ ಈಜಾಡಲು ಹೋಗಿದ್ದಾರೆ. ಆದ್ರೆ, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಇನ್ನು ವೈದ್ಯೆ ಗುಡ್ಡದ ಮೇಲಿಂದ ನದಿಗೆ ಜಿಗಿದಿರುವ ವಿಡಿಯೋ ಎದೆ ಝಲ್​ ಎನ್ನಿಸುತ್ತೆ.

ಕೊಪ್ಪಳ, (ಫೆಬ್ರವರಿ 19): ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ವೈದ್ಯೆ ನೀರು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ. ಹೈದರಬಾದ್ ಮೂಲದ ಅನನ್ಯರಾವ್​(26)ನೀರು ಪಾಲದ‌ ವೈದ್ಯೆ. ಹೈದರಬಾದ್​ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅನನ್ಯರಾವ್​, ನಿನ್ನೆ (ಫೆಬ್ರವರಿ 18) ಮೂವರು ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದು, ಇಂದು(ಫೆಬ್ರವರಿ 19) ಬೆಳಗ್ಗೆ ಸ್ನೇಹಿತರ ಜತೆ ನದಿಯಲ್ಲಿ ಈಜಲು ತೆರಳಿದ್ದರು. ಆದ್ರೆ, ನೀರಿನ ಅಲೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಇನ್ನು ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ವೈದ್ಯೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಇನ್ನು ಅನನ್ಯರಾವ್ ಸುಮಾರು 20 ಅಡಿ ಎತ್ತರದಿಂದ ಜಿಗಿದಿರುವ ದೃಶ್ಯ ಮಾತ್ರ ಭಯಾನಕವಾಗಿದೆ.

Published on: Feb 19, 2025 02:27 PM