ಲವ್ ಕಹಾನಿಗೆ ಬಿಗ್ ಟ್ವಿಸ್ಟ್: 18ರ ಯುವತಿಯನ್ನ ಮದ್ವೆಯಾಗಿದ್ದ 50 ವರ್ಷದ ಅಂಕಲ್ ಅರೆಸ್ಟ್!
ಮನೆಯಿಂದ ನಾಪತ್ತೆಯಾಗಿದ್ದ ಹುಬ್ಬಳ್ಳಿಯ 18 ವರ್ಷದ ಯುವತಿ 50 ವರ್ಷದ ವ್ಯಕ್ತಿ ಜೊತೆಗೆ ಮದುವೆಯಾಗಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುವೆಯಾದ ಬಳಿಕ ಯುವತಿ ವಾಪಸ್ ಮನೆಗೆ ಓಡಿ ಬಂದಿದ್ದು, ಮದ್ವೆಯಾಗಿದ್ದ ಪ್ರಕಾಶ್ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಪ್ರಕಾಶನನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ, (ಫೆಬ್ರವರಿ, 19): 18 ವಯಸ್ಸಿನ ಯುವತಿ ಜೊತೆ ಮದುವೆಯಾದ್ದ 50 ವರ್ಷದ ಪ್ರಕಾಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಿಂದ ನಾಪತ್ತೆಯಾಗಿದ್ದ ಹುಬ್ಬಳ್ಳಿಯ ಕರೀಷ್ಮಾ, 50 ವರ್ಷದ ಸೆಕ್ಯೂರಿಟಿ ಪ್ರಕಾಶ್ ಎನ್ನುವಾತನ ಜೊತೆ ಪತ್ತೆಯಾಗಿದ್ದಳು. ಅಲ್ಲದೇ ಇಬ್ಬರು ಮದುವೆಯಾಗಿದ್ದರು. ಆದ್ರೆ, ಅದೇನಾಯ್ತೋ ಏನೋ ಕರೀಷ್ಮಾ ಪ್ರಕಾಶನನ್ನು ಬಿಟ್ಟು ವಾಪಸ್ ಮನೆಗೆ ಓಡಿ ಬಂದಿದ್ದಾಳೆ. ಅಲ್ಲದೇ ಬಲವಂತವಾಗಿ ನನ್ನ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ ಎಂದು ಪ್ರಕಾಶನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಅಲ್ಲದೇ ಈ ಸಂಬಂಧ ಕರೀಷ್ಮಾ ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಒಂದು ವರ್ಷದ ಹಿಂದೆಯೂ ನನಗೆ ಪ್ರಕಾಶ್ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದೀಗ ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕಾಶನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 18ರ ಯುವತಿ- 50ರ ವ್ಯಕ್ತಿ ಮದ್ವೆಗೆ ಬಿಗ್ ಟ್ವಿಸ್ಟ್: ಅಂಕಲ್ಗೆ ಎದುರಾಯ್ತು ಸಂಕಷ್ಟ!
ಇದನ್ನೂ ಓದಿ: 50 ವರ್ಷದ ಅಂಕಲ್ನ ಮದ್ವೆಯಾದ 18 ವರ್ಷದ ಯುವತಿ: ಹುಬ್ಬಳ್ಳಿಯಲ್ಲೊಂದು ವಿಚಿತ್ರ ಪ್ರೇಮ್ ಕಹಾನಿ
Latest Videos