18ರ ಯುವತಿ- 50ರ ವ್ಯಕ್ತಿ ಮದ್ವೆಗೆ ಬಿಗ್ ಟ್ವಿಸ್ಟ್: ಅಂಕಲ್ಗೆ ಎದುರಾಯ್ತು ಸಂಕಷ್ಟ!
18 ವರ್ಷದ ಯುವತಿ ಹಾಗೂ 50 ವರ್ಷ ವ್ಯಕ್ತಿ ಮದುವೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುವೆಯಾಗಿ ಎರಡು ಮಕ್ಕಳಿದ್ದರೂ 18 ವರ್ಷದ ಯುವತಿಯನ್ನು ಮದುವೆಯಾಗಿದ್ದು, ದೇವಸ್ಥಾನದಲ್ಲಿ ಯುವತಿಗೆ ತಾಳಿ ಕಟ್ಟಿದ ಫೋಟೋ ಹಾಕಿಕೊಂಡಿದ್ದ. ಇದೀಗ ಯುವತಿ ವರಸೆ ಬದಲಿಸಿದ್ದು, ಅಂಕಲ್ಗೆ ಸಂಕಷ್ಟ ಎದುರಾಗಿದೆ. ಹುಬ್ಬಳ್ಳಿಯ ವಿಚಿತ್ರ ಲವ್ ಸ್ಟೋರಿಯಲ್ಲಿ ಮತ್ತೇನಾಯ್ತು ಎನ್ನುವುದನ್ನು ನೋಡಿ.

ಹುಬ್ಬಳ್ಳಿ, (ಫೆಬ್ರವರಿ 18): 18 ವರ್ಷದ ಯುವತಿ ಹಾಗೂ 50 ವರ್ಷದ ಅಂಕಲ್ ಲವ್ ಮ್ಯಾರೇಜ್ ಪ್ರಕರಣ ಹೊಸ ತಿರುವುಪಡೆದುಕೊಂಡಿದೆ. ಮನೆಯಿಂದ ನಾಮಪತ್ತೆಯಾಗಿದ್ದ 18 ವರ್ಷದ ಯುವತಿ ಕರೀಷ್ಮಾ, 50 ವರ್ಷದ ಪ್ರಕಾಶ್ ಎನ್ನುವ ಸೆಕ್ಯೂರಿಟಿ ಜತೆ ಮದುವೆಯಾಗಿದ್ದಳು. ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೂ ಸಹ ಪ್ರಕಾಶ್, ಕರೀಷ್ಮಾ ಜೊತೆ ಮದುವೆಯಾಗಿರುವ ಫೋಟೋವನ್ನು ವಾಟ್ಸಪ್ ಸ್ಟೇಟಸ್ಗೆ ಸಹ ಇಟ್ಟುಕೊಂಡಿದ್ದ. ಇದಾದ ಒಂದೇ ದಿನದಲ್ಲಿ ಈ ಮದುವೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕರೀಷ್ಮಾ ಇದೀಗ ಪ್ರಕಾಶ್ನನ್ನು ಬಿಟ್ಟು ಮನೆಗೆ ಓಡಿಬಂದಿದ್ದಾಳೆ. ಅಲ್ಲದೇ ಪ್ರಕಾಶ್ನ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಬಲವಂತಾಗಿ ಕರೆದುಕೊಂಡು ಹೋಗಿ ಮದ್ವೆಯಾಗಿದ್ದಾರೆ. ಅಲ್ಲದೇ ವಿಡಿಯೋ ತೋರಿಸಿ ನನ್ನ ಜೊತೆ ಕೆಟ್ಟದಾಗಿ ವರ್ತನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇದರಿಂದ ಮಗಳ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದ ಪ್ರಕಾಶ್ಗೆ ಇದೀಗ ಸಂಕಷ್ಟ ಎದುರಾಗಿದೆ.
ಕರೀಷ್ಮಾ ಮಾಡಿದ ಆರೋಪಗಳೇನು?
ಇದೀಗ ಪ್ರಕಾಶ್ನಿಂದ ತಪ್ಪಿಸಿಕೊಂಡು ತಂದೆ-ತಾಯಿ ಬಳಿಗೆ ಓಡಿಬಂದಿರುವ ಕರೀಷ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಕಾಶ್ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ನಾನು ಕೊಲ್ಹಾಪುರದಲ್ಲಿದ್ದೆ. ಕಾಲ್ ಮಾಡಿ ನನ್ನ ಹೊಟೆಲ್ ಗೆ ಕರೆದುಕೊಂಡು ಹೋಗಿದ್ದ. ಬಳಿಕ ನನಗೆ ಕೋಲ್ ಡ್ರಿಂಕ್ಸ್ ನಲ್ಲಿ ಏನೋ ಹಾಕಿ ರೂಮ್ಗೆ ಕರೆದುಕೊಂಡು ಹೋಗಿದ್ದ. ಯಾವ ಊರು ಏನ ಅಂತ ಹೇಳಿಲ್ಲ. ಮಾತು ಕೇಳದೆ ಹೋದ್ರೆ ನನ್ನ ತಂದೆಯನ್ನು ಸಾಯಿಸುವುದಾಗಿ ಧಮ್ಕಿ ಹಾಕಿದ್ದ ಎಂದಿದ್ದಾಳೆ.
ಇದನ್ನೂ ಓದಿ: 50 ವರ್ಷದ ಅಂಕಲ್ನ ಮದ್ವೆಯಾದ 18 ವರ್ಷದ ಯುವತಿ: ಹುಬ್ಬಳ್ಳಿಯಲ್ಲೊಂದು ವಿಚಿತ್ರ ಪ್ರೇಮ್ ಕಹಾನಿ
ನನ್ನ ಮಾತು ಕೇಳದಿದ್ದರೆ ತಂದೆ, ತಾಯಿ ಕೊಲ್ಲುವುದಾಗಿ ಹೆದರಿಸಿ ನನ್ನ ಮದುವೆಯಾಗಿದ್ದ. ಮದುವೆಯಾಗಿದ್ದು ಎಲ್ಲಿ ಅಂತಾನೂ ನನಗೆ ಗೊತ್ತಿಲ್ಲ. ನನ್ನ ತಂದೆ, ತಾಯಿ ವಿರುದ್ಧವೇ ದೂರು ಕೊಡು ಎಂದು ತಾಕೀತು ಮಾಡಿದ್ದ. ಆದರೆ ನಾನು ಪ್ರಕಾಶ್ ವಿರುದ್ಧವೇ ಪೊಲೀಸರಿಗೆ ದೂರು ನೀಡುವೆ. ವಿಡಿಯೋ ತೋರಿಸಿ ನನ್ನ ಜೊತೆ ಕೆಟ್ಟದಾಗಿ ವರ್ತನೆ ಮಾಡಿದ್ದಾನೆ ಎಂದು ತಿಳಿಸಿದ್ದಾಳೆ.
ಘಟನೆ ಹಿನ್ನೆಲೆ
ಕಳೆದ ಹಲವು ದಿನಗಳಿಂದ ಅಜ್ಜಿ ಮನೆಗೆ ಹೋಗುತ್ತೇನೆಂದು ಕರೀಷ್ಮಾ ನಾಪತ್ತೆಯಾಗಿದ್ದಳು. ಈ ಸಂಬಂಧ ತಂದೆ-ತಾಯಿ ಮಗಳನ್ನು ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದರು. ಅಲ್ಲದೆ ಬೀದಿ ಬೀದಿಯಲ್ಲಿ ಫೋಟೋ ಹಿಡಿದು ಅಲೆದಾಡುತ್ತಿದ್ದರು. ಅಲ್ಲದೇ ಪ್ರಕಾಶನೇ ನನ್ನ ಮಗಳನ್ನ ತಲೆ ಕೆಡೆಸಿ ಕರೆದುಕೊಂಡು ಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಇದಾದ ಬಳಿಕ ಪೋಷಕರು ಅನುಮಾನದಂತೆ ಕರೀಷ್ಮಾ ಪ್ರಕಾಶನ ಬಳಿ ಇರುವುದು ಖಚಿತವಾಗಿದೆ. ಅಲ್ಲದೇ ಪ್ರಕಾಶ್ ಹಾಗೂ ಕರೀಷ್ಮಾ ಮದುವೆಯಾಗಿದ್ದರು. ಆ ಫೋಟೋವನ್ನು ಪ್ರಕಾಶ್ ವಾಟ್ಸಪ್ ಸ್ಟೇಟಸ್ಗೆ ಹಾಕಿಕೊಂಡಿದ್ದ. ಈ ವಿಚಾರ ಕರೀಷ್ಮಾರ ತಂದೆ ತಾಯಿಗೆ ಗೊತ್ತಾಗಿದ್ದು, ನನ್ನ ಮಗಳ ತಲೆ ಕಡೆಸಿ ಮದುವೆಯಾಗಿದ್ದಾನೆ ಎಂದು ಅರೋಪಸಿದ್ದರು.
ಇದಾದ ಬಳಿಕ ಕರೀಷ್ಮಾ ಎಲ್ಲಿದ್ದಳೋ ಏನೋ ಏಕಾಏಕಿ ಇಂದು (ಫೆಬ್ರವರಿ 18) ಮನೆಗೆ ವಾಪಸ್ ಆಗಿದ್ದಾಳೆ. ಅಲ್ಲದೇ ಪ್ರಕಾಶನ ಮೇಲೆ ಕೆಲ ಆರೋಪಗಳನ್ನು ಹೊರಿಸಿದ್ದಾಳೆ. ಅಲ್ಲದೇ ಪೊಲೀಸ್ ಠಾಣೆಗೆ ದೂರು ನೀಡುವುದಾಗಿಯೂ ಹೇಳಿದ್ದಾಳೆ. ಇದರಿಂದ ಇದೀಗ ಪ್ರಕಾಶ್ಗೆ ಸಂಕಷ್ಟ ಎದುರಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ