ಕೆಲಸ ಮಾಡದ ಸಚಿವರ ತಲೆದಂಡದ ಚರ್ಚೆ: ಇಲ್ಲಿದೆ ಕಾಂಗ್ರೆಸ್ ಡಿನ್ನರ್ ಸಭೆಯ ಇನ್ಸೈಡ್ ಡಿಟೇಲ್ಸ್
ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸಚಿವರುಗಳು ಒಟ್ಟಾಗಿ ಸೇರಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ರಿಂದ ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ಔತಣಕೂಟ ಆಯೋಜನೆ ಮಾಡಲಾಗಿದೆ. ಆ ಮೂಲಕ ಲೋಕಸಭೆ ಚುನಾವಣೆ ಬಳಿಕ ಇದೇ ಮೊದಲ ಔತಣಕೂಟವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದಾದ ಅಂಕಿ ಅಂಶಗಳ ಕುರಿತು ಚರ್ಚೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಮುಂಬರುವ ಸ್ಥಳೀಯ ಚುನಾವಣೆ, ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದೆ.
ಬೆಂಗಳೂರು, ಮೇ 22: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ (Congress) ಸಚಿವರುಗಳು ಒಟ್ಟಾಗಿ ಸೇರಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ರಿಂದ (DK Shivakumar) ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ಔತಣಕೂಟ ಆಯೋಜನೆ ಮಾಡಲಾಗಿದೆ. ಆ ಮೂಲಕ ಲೋಕಸಭೆ ಚುನಾವಣೆ ಬಳಿಕ ಇದೇ ಮೊದಲ ಔತಣಕೂಟವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದಾದ ಅಂಕಿ ಅಂಶಗಳ ಕುರಿತು ಚರ್ಚೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಮುಂಬರುವ ಸ್ಥಳೀಯ ಚುನಾವಣೆ, ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದೆ. ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡದ ಸಚಿವರ ತಲೆದಂಡಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಂದು ವರ್ಷದಲ್ಲಿ ತಮ್ಮ ಇಲಾಖೆಯಲ್ಲಿ ಅಭಿವೃದ್ದಿ ಮಾಡದ ಸಚಿವರ ತಲೆದಂಡದ ಕುರಿತು ಚರ್ಚೆ ಮಾಡಲಾಗಿದೆ. ಮುಂಬರುವ ಪರಿಷತ್ ಚುನಾವಣೆಯಲ್ಲಿ ಯಾರಿಗೆ ಅವಕಾಶ ಕೊಡಬೇಕು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಬಿಬಿಎಂಪಿ ಚುನಾವಣೆ, ಕೆಪಿಸಿಸಿಯಲ್ಲಿ ಕೆಲವು ಸ್ಥಾನಗಳ ಬದಲಾವಣೆ ವಿಚಾರವಾಗಿ, ಮುಂದಿನ ದಿನಗಳಲ್ಲಿ ಅಧಿವೇಶನ ಬರುತ್ತಿರುವ ಹಿನ್ನೆಲೆ ಎಲ್ಲರೂ ಒಗ್ಗಟ್ಟಾಗ್ಬೇಕು. ಒಗ್ಗಟ್ಟಾಗಿ ವಿಪಕ್ಷ ನಾಯಕರನ್ನ ಕಟ್ಟು ಹಾಕಬೇಕು ಎಂಬ ಸಂದೇಶ ರವಾನೆ ಮಾಡಿದ್ದಾರೆ. ಸರ್ಕಾರದ ಗ್ಯಾರೆಂಟಿ ವಿಚಾರಗಳನ್ನ ಮತ್ತಷ್ಟು ಪ್ರಚಾರಗೊಳಿಸಬೇಕು. ನೀತಿ ಸಂಹಿತೆ ಬಳಿಕ ಸರ್ಕಾರದ ಒಂದು ವರ್ಷದ ಸಾಧನ ಸಮಾವೇಶ ನಡೆಸುವ ಕುರಿತು ಚರ್ಚೆ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.