‘ನೀಚವಾಗಿ ಬೈಯ್ದು, ರಾಜಕೀಯ ಮಾಡುವವರ ಲೆವೆಲ್​ಗೆ ರಮ್ಯಾ ಇಳಿಯಲ್ಲ’: ಕವಿತಾ ಲಂಕೇಶ್​

| Updated By: ಮದನ್​ ಕುಮಾರ್​

Updated on: Aug 29, 2021 | 10:08 AM

‘ರಮ್ಯಾ ಮತ್ತೆ ಸಿನಿಮಾಗೆ ಬರಬೇಕು ಎಂಬ ಆಸೆ ನನಗೂ ಇದೆ. ಅವಳ ವಯಸ್ಸಿಗೆ ತಕ್ಕಂತಹ ಕಥೆ ಸಾಕಷ್ಟಿವೆ. ಅವಳು ಒಪ್ಪಿಕೊಂಡರೆ ಖಂಡಿತಾ ಒಂದು ಕಮರ್ಷಿಯಲ್​ ಸಿನಿಮಾ ಮಾಡ್ತೀನಿ’ ಎಂದು ಕವಿತಾ ಲಂಕೇಶ್​ ಹೇಳಿದ್ದಾರೆ.

ನಟಿ ರಮ್ಯಾ ಈಗ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ಅವರು ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂಬುದು ಅನೇಕರ ಆಸೆ. ಈ ಬಗ್ಗೆ ನಿರ್ದೇಶಕಿ ಕವಿತಾ ಲಂಕೇಶ್​ ಮಾತನಾಡಿದ್ದಾರೆ. ‘ಅವಳು ಮತ್ತೆ ಸಿನಿಮಾಗೆ ಬರಬೇಕು ಎಂಬ ಆಸೆ ನನಗೂ ಇದೆ. ಅವಳ ವಯಸ್ಸಿಗೆ ತಕ್ಕಂತಹ ಕಥೆ ಸಾಕಷ್ಟಿವೆ. ಅವಳು ಒಪ್ಪಿಕೊಂಡರೆ ಖಂಡಿತಾ ಒಂದು ಕಮರ್ಷಿಯಲ್​ ಸಿನಿಮಾ ಮಾಡ್ತೀನಿ. ಅವಳ ಬಗ್ಗೆ ಜನರಿಗೆ ಇನ್ನೂ ಕ್ರೇಜ್​ ಹಾಗೆಯೇ ಇದೆ’ ಎಂದು ಕವಿತಾ ಲಂಕೇಶ್​ ಹೇಳಿದ್ದಾರೆ. ರಾಜಕೀಯ ಪಯಣದಲ್ಲಿ ರಮ್ಯಾ ಎದುರಿಸಿದ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.

‘ಮಹಿಳೆ ಎಂಬ ಕಾರಣಕ್ಕೆ ರಾಜಕೀಯದಲ್ಲಿ ಅವರನ್ನು ಕೆಟ್ಟದಾಗಿ ಟೀಕೆ ಮಾಡಲಾಯಿತು. ಅಪ್ಪನ ಬಗ್ಗೆ ಮಾತನಾಡಲಾಯಿತು. ಅದನ್ನು ಅವಳು ತುಂಬ ಚೆನ್ನಾಗಿ ನಿಭಾಯಿಸುತ್ತಾಳೆ. ಯಾರು ಎಷ್ಟೇ ನೀಚವಾಗಿ ಬೈಯ್ದು, ರಾಜಕೀಯ ಮಾಡಿದರೂ ಆ ಲೆವೆಲ್​ಗೆ ಇಳಿದು ರಮ್ಯಾ ಜಗಳ ಮಾಡಿಲ್ಲ. ಅವಳು ಗೌರವದಿಂದಲೇ ನಡೆದುಕೊಂಡಿದ್ದಾಳೆ. ಈಗ ಸಿನಿಮಾ ಬೇಡ ಅಂತ ಬೇರೆ ಕೆಲಸ ಮಾಡಿಕೊಂಡಿದ್ದಾಳೆ. ಖುಷಿಯಾಗಿದ್ದರೆ ತಪ್ಪೇನೂ ಇಲ್ಲ’ ಎಂದು ಕವಿತಾ ಲಂಕೇಶ್​ ಹೇಳಿದ್ದಾರೆ.

ಇದನ್ನೂ ಓದಿ:

ಗ್ಯಾಂಗ್​ ರೇಪ್​: ಹುಡುಗಿಯದ್ದೇ ತಪ್ಪು ಅನ್ನೋರಿಗೆ ರಮ್ಯಾ ಛೀಮಾರಿ; ಪರಿಸ್ಥಿತಿ ಬದಲಾಗ್ಬೇಕು ಎಂದ ನಟಿ

ಸಿನಿಮಾ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಬಂದ ಕೇಂದ್ರದ ವಿರುದ್ಧ ಕಿಡಿಕಾರಿದ ನಟಿ ರಮ್ಯಾ

Published on: Aug 29, 2021 09:58 AM