‘ಅವತಾರ ಪುರುಷ’ ಬೇರೆ ಭಾಷೆಗೆ ಯಾಕೆ ಡಬ್​ ಆಗಿಲ್ಲ? ಪ್ಯಾನ್​ ಇಂಡಿಯಾ ಪ್ಲಾನ್​ ಬಗ್ಗೆ ಸುನಿ ಹೇಳೋದಿಷ್ಟು..

| Updated By: ಮದನ್​ ಕುಮಾರ್​

Updated on: May 05, 2022 | 9:55 AM

2 ಪಾರ್ಟ್​ಗಳಲ್ಲಿ ‘ಅವತಾರ ಪುರುಷ’ ಸಿನಿಮಾ ಮೂಡಿಬರುತ್ತಿದೆ. ಆ ಬಗ್ಗೆ ನಿರ್ದೇಶಕ ಸಿಂಪಲ್​ ಸುನಿ ಮಾತನಾಡಿದ್ದಾರೆ.

ಈಗ ಎಲ್ಲೆಲ್ಲೂ ಪ್ಯಾನ್​ ಇಂಡಿಯಾ ಸಿನಿಮಾಗಳು ಹವಾ ಮಾಡುತ್ತಿವೆ. ‘ಕೆಜಿಎಫ್​ 2’ (KGF 2) ಚಿತ್ರದ ಭರ್ಜರಿ ಗೆಲುವಿನ ಬಳಿಕ ಪ್ಯಾನ್​ ಇಂಡಿಯಾ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚುವಂತಾಗಿದೆ. ಹಾಗಂತ ಮುಂಬರುವ ಎಲ್ಲ ಚಿತ್ರಗಳನ್ನೂ ಇದೇ ಮಟ್ಟದಲ್ಲಿ ರಿಲೀಸ್​ ಮಾಡಲು ಸಾಧ್ಯವಿಲ್ಲ. ಆ ಬಗ್ಗೆ ಸಿಂಪಲ್​ ಸುನಿ (Simple Suni) ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಅವತಾರ ಪುರುಷ’ ಸಿನಿಮಾ (Avatara Purusha Movie) ಮೇ 6ರಂದು ಬಿಡುಗಡೆ ಆಗುತ್ತಿದೆ. ಶರಣ್​ ಮತ್ತು ಆಶಿಕಾ ರಂಗನಾಥ್​ ಜೋಡಿಯಾಗಿ ನಟಿಸಿರುವ ಈ ಸಿನಿಮಾ ಕೂಡ ‘ಕೆಜಿಎಫ್​’ ರೀತಿ ಎರಡು ಪಾರ್ಟ್​ನಲ್ಲಿ ಮೂಡಿಬರುತ್ತಿದೆ. ಮೊದಲ ಪಾರ್ಟ್​ ಹಿಟ್​ ಆದರೆ ಎರಡನೇ ಪಾರ್ಟ್​ ಅನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಮಾಡುತ್ತೀರಾ ಎಂಬ ಪ್ರಶ್ನೆಗೆ ಸುನಿ ಉತ್ತರಿಸಿದ್ದಾರೆ. ‘ಬೇರೆ ಭಾಷೆಗೆ ಡಬ್​​ ಮಾಡುವ ಆಲೋಚನೆ ಇಲ್ಲ’ ಎಂದು ಹೇಳಿರುವ ಅವರು ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: May 05, 2022 09:55 AM